ಬೆಂಗಳೂರು: ವಿದ್ಯುತ್ ದರ ಏರಿಕೆ ಮಾಡಲು ಎಸ್ಕಾಂಗಳಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ಕೈಗಾರಿಕಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ತೀವ್ರ ವಿರೋಧ ವ್ಯಕ್ತಪಡಿಸಿದೆ. ವರ್ಷದಲ್ಲಿ ಮೂರು ಬಾರಿ ವಿದ್ಯುತ್ ದರ ಏರಿಕೆಯಾಗುತ್ತಿದೆ. ಡಿಸೆಂಬರ್‌ನಲ್ಲಿ ದರ ಪರಿಷ್ಕರಣೆಗೆ (Power Tariff Hike) ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆಯೇ ಮುಂದುವರಿದರೆ ಸಣ್ಣ ಕೈಗಾರಿಕೆಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಲಿದೆ ಎಂದು ಎಫ್‌ಕೆಸಿಸಿಐ ಅಸಮಾಧಾನ ಹೊರಹಾಕಿದೆ.
ಈ ಬಗ್ಗೆ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಎಸ್ಕಾಂಗಳು ವಿದ್ಯುತ್ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಿದೆ. ಈ ಸಂಬಂಧ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆಕ್ಷೇಪಣೆಗಳ ಸಲ್ಲಿಕೆಗೆ ಕಾಲಾವಕಾಶ ನೀಡಿದೆ. ಎಸ್ಕಾಂಗಳ ಅರ್ಜಿ ಗಮನಿಸಿದರೆ, ಇದು ನಮ್ಮ ರಾಜ್ಯದ ಉತ್ಪಾದನೆ ಹಾಗೂ ಸೇವಾ ವಲಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದರು.
ಸಣ್ಣ ಕೈಗಾರಿಕೆಗಳು ರಾಜ್ಯದ ಒಟ್ಟಾರೆ ವಿದ್ಯುತ್ ಬಳಕೆಯಲ್ಲಿ ಶೇ. 3.20 ಪ್ರಮಾಣದಲ್ಲಿ ಬಳಸುತ್ತಿದ್ದು, ಸುಮಾರು 40 ಲಕ್ಷ ಉದ್ಯೋಗವನ್ನು ಸೃಷ್ಟಿಸಿವೆ. ಪ್ರತಿ ಉದ್ಯೋಗಿಯು ಕನಿಷ್ಠ 4 ಜನರಿರುವ ಇರುವ ಕುಟುಂಬ ನಿರ್ವಹಿಸುತ್ತಿದ್ದಾರೆ. ಹಾಗೆಯೇ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಉತ್ಪಾದನಾ ಘಟಕಗಳು ಶೇ.16.30 ವಿದ್ಯುತ್ ಬಳಕೆ ಮಾಡುತ್ತಿವೆ. ಆದರೆ, ವಿದ್ಯುಚ್ಛಕ್ತಿ ದರಗಳು ಹೆಚ್ಚಿಸುತ್ತಾ ಹೋಗುತ್ತಿದ್ದರೆ ಅವರ ಖರ್ಚು, ವೆಚ್ಚ ಜಾಸ್ತಿಯಾಗಿ ಉದ್ಯಮಗಳನ್ನು ಮುಚ್ಚುವ ಸ್ಥಿತಿ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತೀಚಿನ ದರ ಪರಿಷ್ಕರಣಾ ಅರ್ಜಿಯಲ್ಲಿ ಒಂದು ವೈಚಿತ್ರ್ಯ ಗಮನಿಸಬೇಕಾಗುತ್ತದೆ. ವಿದ್ಯಚ್ಛಕ್ತಿ ನಿಗಮದ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ನಿವೃತ್ತಿ ವೇತನದ ಬಾಬ್ತನ್ನು ಗ್ರಾಹಕರ ಮೇಲೆ ಹಾಕಲು ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಗ್ರಾಹಕರು 3೩5೩ ಕೋಟಿ ರೂ.ಗಳನ್ನು ಮೂರು ವಾರ್ಷಿಕ ಕಂತುಗಳಲ್ಲಿ ಕಟ್ಟಬೇಕಾಗಿದೆ. ಅದೇ ರೀತಿ ತಣ್ಣೀರು ಬಾವಿ ಬಾಬ್ತುಗೆ ಸಂಬಂಧಪಟ್ಟ 1,6೫7 ಕೋಟಿ ರೂ.ಗಳನ್ನು ಗ್ರಾಹಕರಿಂದ ಸುಂಕದ ಮೂಲಕ ಸಂಗ್ರಹಿಸಲು ಆದೇಶ ಹೊರಡಿಸಲಾಗಿದೆ. ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕಾ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಈ ನಿರ್ಧಾರವನ್ನು ಇಂದನ ಇಲಾಖೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದೆ ಎಸ್ಕಾಂಗಳು ಇಟ್ಟಿರುವ ಪ್ರಸ್ತಾವನೆಗಳು:
೧. ಡಿಮಾಂಡ್ ಡ್ರಾಫ್ಟ್/ ಫಿಕ್ಸ್‌ಡ್ ಚಾರ್ಜಸ್
2. ಸ್ಪೆಷಲ್ ಇನ್ಸೆಂಟಿವ್ ಸ್ಕೀಮ್ ಹಿಂತೆಗೆದುಕೊಳ್ಳುವುದು
3. ಓಪನ್ ಆಕ್ಸೆಸ್ ಗ್ರಾಹಕರಿಗೆ ಗ್ರಿಡ್ ಸಪೋರ್ಟ್ ಚಾರ್ಜಸ್ ಹೊರಿಸುವುದು
೪. ಗೃಹ ವಿದ್ಯುತ್ ಬಳಕೆದಾರರಿಗೆ ಇದುವರೆಗೂ ಕೊಟ್ಟಿದ ಸೋಲಾರ್ ವಾಟರ್ ರಿಯಾಯಿತಿ ಹಿಂತೆದುಕೊಳ್ಳುವುದು
ಇದನ್ನೂ ಓದಿ | Price rise | ಸಂಕ್ರಾಂತಿಗೆ ಎಳ್ಳು-ಬೆಲ್ಲ ದುಬಾರಿಯಾಗಿದ್ದರೂ, ಖರೀದಿ ಭರಾಟೆ ಜೋರು