ಹಾವೇರಿ: 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ (Independence Day) ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲೆಯ ದಿ. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ”ನಮ್ಮ ಸರಕಾರ ನವ ಭಾರತಕ್ಕಾಗಿ ನವ ಕರ್ನಾಟಕ, ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ಸಂಕಲ್ಪದೊಂದಿಗೆ ನಾಡಿನ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ಸರಳತೆ, ಸಂವೇದನಾಶೀಲ ನಡವಳಿಕೆಯಿಂದ ನಾಡಿನ ಜನರ ಹೃದಯದಲ್ಲಿ ಕಾಮನ್ ಮ್ಯಾನ್ ಸಿಎಂ ಎಂದು ಬಸವರಾಜ ಬೊಮ್ಮಾಯಿ ಛಾಪು ಮೂಡಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಜನ ಕಲ್ಯಾಣ, ಅಭಿವೃದ್ಧಿ, ವಿತ್ತೀಯ ಶಿಶ್ತನ್ನು ಸರಿದೂಗಿಸಿದ್ದಾರೆ. ಪಿಂಚಣಿ ಹೆಚ್ಚಳ, ಪುಣ್ಯಕೋಟಿ ಯೋಜನೆಯಂತಹ ಮಹತ್ವದ ಯೋಜನೆ ರೂಪಿಸಿದ್ದಾರೆʼʼ ಎಂದು ಶ್ಲಾಘಿಸಿದರು.
ʻʻಹಾವೇರಿ ಸರಕಾರಿ ವೈದಕೀಯ ಕಾಲೇಜು ಡಿಸೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಶಿಗ್ಗಾಂವ್ ಜವಳಿ ಪಾರ್ಕ್‌ಗೆ 59.34 ಕೋಟಿ ರೂ. ವೆಚ್ಚದಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಚಿನ್ನಮುಳುಗುಂದದಲ್ಲಿ ಗೋವಿನಜೋಳ ಸಂಶೋಧನಾ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದೆ. ಸವಣೂರಿನಲ್ಲಿ ಆಯುರ್ವೇದಿಕ್ ಮಹಾವಿದ್ಯಾಲಯ ಸ್ಥಾಪನೆಗೆ ಐದು ಎಕರೆ ಜಮೀನು ಖರೀದಿಸಲಾಗಿದೆʼʼ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | MLC Election| ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್ ಪ್ರಚಾರ