Site icon Vistara News

Flex Controversy | ಮಂಗಳೂರಿನಲ್ಲಿ ಸಾವರ್ಕರ್ ಬ್ಯಾನರ್ ಜತೆ ನಾಥೂರಾಮ್ ಗೋಡ್ಸೆಯೂ ಪ್ರತ್ಯಕ್ಷ!

Flex Controversy

ಮಂಗಳೂರು: ಶಿವಮೊಗ್ಗದಲ್ಲಿ ಹುಟ್ಟಿಕೊಂಡ ವೀರ ಸಾವರ್ಕರ್‌ ಫ್ಲೆಕ್ಸ್‌ ವಿವಾದ (Flex Controversy) ಇನ್ನೂ ಜೀವಂತವಾಗಿರುವಾಗಲೇ ಮಂಗಳೂರಿನಲ್ಲಿ ಈಗ ಮತ್ತೊಂದು ವಿವಾದ ಹೊಸ ರೂಪ ಪಡೆದುಕೊಳ್ಳುತ್ತಿದೆ.

ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ಸಾವರ್ಕರ್ ಬ್ಯಾನರ್ ಜತೆಗೆ ನಾಥೂರಾಮ್ ಗೋಡ್ಸೆ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭ ಕೋರುವ ನೆಪದಲ್ಲಿ ಗೋಡ್ಸೆಗೆ ಗೌರವ ತೋರಿದ್ದು, ಹಿಂದು ಮಹಾಸಭಾ ಹೆಸರಿನಲ್ಲಿ ಮಂಗಳೂರಿನ ಹಲವೆಡೆ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ | Flex Controversy | ತುಮಕೂರಿನಲ್ಲಿ ಮತ್ತೆ ಸಾವರ್ಕರ್‌ ಚಿತ್ರವಿರುವ ಫ್ಲೆಕ್ಸ್‌ ಅಳವಡಿಸಿದ ಹಿಂದೂ ಕಾರ್ಯಕರ್ತರು

ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ್ದು, ರಾಜಕೀಯವನ್ನು ಹಿಂದುತ್ವಗೊಳಿಸಿ, ಹಿಂದುಗಳನ್ನು ಸೈನಿಕೀಕರಣಗೊಳಿಸಿ ಎಂಬ ಬರಹದೊಂದಿಗೆ ಫೋಟೊ ಬಳಕೆ ಮಾಡಲಾಗಿದೆ.

ಈ ಹಿಂದಷ್ಟೇ ಇದೇ ವಿಚಾರವಾಗಿ ತುಮಕೂರಿನಲ್ಲಿ ಕಳೆದ ಸೋಮವಾರ ರಾತ್ರಿ ನಗರದಲ್ಲಿ ಅಳವಡಿಸಲಾಗಿದ್ದ ಸಾವರ್ಕರ್‌ ಚಿತ್ರವಿದ್ದ ಫ್ಲೆಕ್ಸ್‌ನ್ನು ಹರಿದು ಹಾಕಲಾಗಿತ್ತು. ಅಲ್ಲದೆ, ಗೋಡ್ಸೆ ಫೋಟೊವನ್ನು ಹಾಕಲಾಗಿತ್ತು. ಬಳಿಕ ಪುರಸಭೆ ಅದನ್ನು ತೆರವುಗೊಳಿಸಿತ್ತು. ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಮತ್ತೆ ಸಾವರ್ಕರ್‌ ಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಇದೀಗ ಮಂಗಳೂರಿನಲ್ಲಿಯೂ ಇದೇ ಪ್ರಕರಣ ಮರುಕಳಿಸಿದೆ.

ಇದನ್ನೂ ಓದಿ | Veer Savarkar | ಸಾವರ್ಕರ್‌ ವಿಷಯದಲ್ಲಿ ಬೀದಿ ಕಾಳಗ ದುರದೃಷ್ಟಕರ ಎಂದ ಇತಿಹಾಸ ತಜ್ಞ ವಿಕ್ರಮ ಸಂಪತ್‌

Exit mobile version