Site icon Vistara News

Food Poisoning | ತೊಟ್ಟಿಲು ಶಾಸ್ತ್ರದಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ; ಆಸ್ಪತ್ರೆಗೆ ಭೇಟಿ ನೀಡಿದ ರೇಣುಕಾಚಾರ್ಯ

ದಾವಣಗೆರೆ: ಇಲ್ಲಿನ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮದಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ (Food Poisoning) ಘಟನೆ ನಡೆದಿದೆ.

ಮಕ್ಕಳು ಸೇರಿದಂತೆ ವಯೋವೃದ್ಧರು ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ (Food Poisoning) ನ್ಯಾಮತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾನುವಾರ ಮಧ್ಯಾಹ್ನ ಗ್ರಾಮದಲ್ಲಿ ಮಗುವಿನ ತೊಟ್ಟಿಲು ಶಾಸ್ತ್ರ ನಡೆದಿತ್ತು.

ಒಬ್ಬರ ಹಿಂದೊಬ್ಬರಂತೆ ರಾತ್ರಿ ಹೊತ್ತಿಗೆ ವಾಂತಿ-ಭೇದಿ ಶುರುವಾಗಿದೆ. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಸೋಮವಾರ ನ್ಯಾಮತಿ ಆಸ್ಪತ್ರೆಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸಹೋದರ ಮಗ ಮೃತಪಟ್ಟ ದುಃಖದಲ್ಲಿದ್ದರೂ ಅಸ್ವಸ್ಥರ ಆರೋಗ್ಯ ವಿಚಾರಿಸಲು ಬಂದ ರೇಣುಕಾಚಾರ್ಯರಿಗೆ ಧೈರ್ಯ ತುಂಬಿದ ಘಟನೆಯು ನಡೆಯಿತು.

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಕಾಲದಲ್ಲಿ ದೇವರಿಗಿಲ್ಲ ಪೂಜೆ-ಪುನಸ್ಕಾರ; ಭಕ್ತರಿಗಿಲ್ಲ ದರ್ಶನ ಭಾಗ್ಯ

Exit mobile version