ಕಾರವಾರ: ಇತ್ತೀಚೆಗೆ ಮಂಗಳೂರಿನಲ್ಲಿ ಲವ್ ಜಿಹಾದ್ ಕೂಗು ಹಾಗೂ ಕೆಲಸದ ಆಮಿಷವೊಡ್ಡಿ ಇಸ್ಲಾಂಗೆ ಮತಾಂತರ (Forced conversion) ಮಾಡಿರುವ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲೇ ಅನಾರೋಗ್ಯ ಪೀಡಿತರನ್ನು ಗುರಿಯಾಗಿಸಿ ಪಾದ್ರಿಯೊಬ್ಬರು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಕೇಳಿ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಲಾರೆನ್ಸ್ ಫರ್ನಾಂಡಿಸ್ ಎಂಬಾತನ ವಿರುದ್ಧ ಮತಾಂತರ ಆರೋಪ ಕೇಳಿ ಬಂದಿದೆ. ಜೋಯಿಡಾದ ಕುಂಬಾರವಾಡ ಮೂಲದ ಪಾದ್ರಿಯಾಗಿರುವ ಲಾರೆನ್ಸ್ ಫರ್ನಾಂಡಿಸ್, ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳನ್ನು ಟಾರ್ಗೆಟ್ ಮಾಡಿ, ಮುಗ್ಧ ಜನರನ್ನು ಮರಳು ಮಾಡಿ ರೋಗ ಗುಣಪಡಿಸುವ ನೆಪದಲ್ಲಿ ಮತಾಂತರ ಯತ್ನಿಸಿದ್ದರಂತೆ.
ರೋಗ ಗುಣವಾಗಲು ಯೇಸುವನ್ನು ಆರಾಧಿಸುವಂತೆ ಮನಃಪರಿವರ್ತನೆ ಮಾಡುತ್ತಿದ್ದಾರಂತೆ. ತಾಲೂಕಿನ ಕುಂಬಾರವಾಡ, ಚಾಪೇಲಿ, ದಾಂಡೇಲಿ ಭಾಗದ ಸುತ್ತಮುತ್ತ ಕಾರ್ಯಕ್ರಮ ಆಯೋಜನೆ ಮಾಡಿ, ರೋಗ ಗುಣಪಡಿಸುವಂತೆ ಯಾಮಾರಿಸುತ್ತಿರುವುದು ಕಂಡು ಬಂದಿದೆ. ಲಾರೆನ್ಸ್ ವಿರುದ್ಧ ಸ್ಥಳೀಯರು ಮತಾಂತರ ಯತ್ನ ಮಾಡಲಾಗುತ್ತಿದೆ ಎಂದು ಜೋಯಿಡಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ | Religious Conversion | ಅನಧಿಕೃತ ಪ್ರಾರ್ಥನಾಲಯ ನಿರ್ಮಿಸಿ ಮತಾಂತರ ಆರೋಪ: ಹಿಂದು ಕಾರ್ಯಕರ್ತರಿಂದ ಮುತ್ತಿಗೆ