ಕಾರವಾರ: ವಿದೇಶಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಸಂಗೀತ ವಾದ್ಯ ನುಡಿಸಿ, ಮನೋರಂಜನೆ ನೀಡಿ ಪ್ರೇಕ್ಷಕರಿಂದ ಹಣ ಪಡೆಯುವುದು ಸಾಮಾನ್ಯ. ಆದರೆ, ಈ ಸಂಸ್ಕೃತಿ ಈಗ ಗೋಕರ್ಣಕ್ಕೂ ಕಾಲಿಟ್ಟಿದ್ದು, ವಿದೇಶಿ ಮಹಿಳೆಯೊಬ್ಬರು (Foreign Tourist) ವಯೋಲಿನ್ ನುಡಿಸಿ ಹಣ ಸಂಪಾದನೆ ಮಾಡುತ್ತಿದ್ದಾರೆ.
ಕಳೆದೆರಡು ದಿನಗಳಿಂದ ವಿದೇಶಿ ಪ್ರವಾಸಿ ಮಹಿಳೆಯೊಬ್ಬರು ರಸ್ತೆಯ ಒಂದೊಂದು ಕಡೆ ನಿಂತು ವಯೋಲಿನ್ ನುಡಿಸುತ್ತಾ ಹಣ ಪಡೆಯುತ್ತಿದ್ದಾರೆ. ಜನರೂ ಸಹ ಅವರ ವಯೋಲಿನ್ ವಾದನಕ್ಕೆ ತಲೆದೂಗಿ ಹಣ ಕೊಡುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ವಯೋಲಿನ್ ಬಾಕ್ಸ್ ಅನ್ನು ನೆಲದ ಮೇಲೆ ಇಟ್ಟು ತಾನೇ ಮೊದಲು ಹಣ ಹಾಕಿ ಜನರು ಹಣ ನೀಡುವಂತೆ ಈಕೆ ಸೂಚಿಸುತ್ತಾರೆ. ಕೆಲಹೊತ್ತು ವಯೋಲಿನ್ ನುಡಿಸಿ ಹಣ ಪಡೆದು ಮುಂದೆ ಸಾಗುತ್ತಾರೆ.
ಇದನ್ನೂ ಓದಿ |Kite tragedy | ಗಾಳಿಪಟ ಹಾರಿಸುವಾಗ ಹೈಟೆನ್ಶನ್ ವಯರ್ ತಗುಲಿ 11 ವರ್ಷದ ಬಾಲಕ ದಾರುಣ ಬಲಿ
ಗೋಕರ್ಣದಲ್ಲಿ ವಾರಕ್ಕೊಮ್ಮೆ ವಿದೇಶಿಗರೇ ವ್ಯಾಪಾರ ವಹಿವಾಟು ನಡೆಸುವ ಸಂತೆ ಸಹ ನಡೆಯುತ್ತದೆ. ಪ್ರವಾಸಕ್ಕೆ ಬಂದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ವಿದೇಶಿಗರು ಹಣ ಗಳಿಕೆಗೆ ಕಂಡುಕೊಂಡ ದಾರಿಯಂತೆ ಇದು ಕಾಣುತ್ತಿದೆ. ಕೊರೊನಾ ಅವಧಿಯಲ್ಲಿ ಗೋಕರ್ಣದಲ್ಲಿ ಸಿಲುಕಿಕೊಂಡಿದ್ದ ವಿದೇಶಿಗರು ಇಲ್ಲಿಯೇ ವಿವಿಧ ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿಕೊಂಡು ದಿನ ಕಳೆದ ನಿದರ್ಶನಗಳು ಇಲ್ಲಿವೆ.
ಇದನ್ನೂ ಓದಿ | 7th Pay Commission : ನೌಕರರಿಂದ ಮಾಹಿತಿ ಸಂಗ್ರಹಿಸಲು ಪ್ರಶ್ನಾವಳಿ ಪ್ರಕಟಿಸಿದ ಆಯೋಗ