Site icon Vistara News

Forest Fire: ನಿಸರ್ಗ ಮನೆ ಬಳಿ ಅರಣ್ಯಕ್ಕೆ ಬೆಂಕಿ: ಅಪಾರ ಪ್ರಮಾಣದ ವನ್ಯ ಸಂಪತ್ತು ನಾಶ

Forest Fire yallapura

#image_title

ಯಲ್ಲಾಪುರ: ತಾಲೂಕಿನ ನಿಸರ್ಗ ಮನೆ ಬಳಿ ಅರಣ್ಯಕ್ಕೆ ಬೆಂಕಿ ತಗುಲಿ (Forest fire) ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿರುವ ಘಟನೆ ಬುಧವಾರ (ಫೆ.೨೨) ಸಂಜೆ ನಡೆದಿದೆ. ಗ್ರಾಮ ದೇವಿ ಜಾತ್ರಾ ಪ್ರಯುಕ್ತ ಹೆದ್ದಾರಿ ಬಂದ್‌ ಮಾಡಲಾಗಿದ್ದು, ವಾಹನಗಳಿಗೆ ಬೀಸ್ಗೋಡ್‌-ನಿಸರ್ಗ ಮನೆಯ ಕಿರಿದಾದ ದಾರಿಯ ಮೂಲಕ ಬದಲಿ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಾಹನದ ಚಾಲಕರಲ್ಲಿ ಯಾರೋ ಎಸೆದ ಸಿಗರೇಟ್‌ ಅಥವಾ ಮರಕ್ಕೆ ವಿದ್ಯುತ್‌ ಸ್ಪರ್ಶದಿಂದ ಕಿಡಿ ಹೊತ್ತಿ ಬೆಂಕಿ ಹಬ್ಬಿರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Bill gates: ಭಾರತ ಜಗತ್ತಿಗೇ ಭರವಸೆ: ಬಿಲ್‌ ಗೇಟ್ಸ್ ಮುಕ್ತ ಶ್ಲಾಘನೆ

ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗಜಾನನ ನಾಯ್ಕ ಹಾಗೂ ಇನ್ನಿತರ ಗ್ರಾಮಸ್ಥರ ನೆರವಿನಿಂದ ಗಂಟೆಗಳ ಪರಿಶ್ರಮದೊಂದಿಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ ಎಲೆಗಳು ಒಣಗಿ ಉದುರಿರುವ ಕಾರಣ ಕೆಳಹಂತದ ಗಿಡಗಳೆಲ್ಲ ಸುಟ್ಟು ಹೋಗಿದ್ದು, ದೊಡ್ಡ ದೊಡ್ಡ ಮರಗಳಿಗೆ ಬೆಂಕಿಯ ಕೆನ್ನಾಲಿಗೆ ಹಬ್ಬುವುದನ್ನು ತಪ್ಪಿಸಿದ್ದಾರೆ.

“ಈ ಭಾಗದಲ್ಲಿ ಕಾಡಿಗೆ ಬೆಂಕಿ ಬಿದ್ದಿರುವುದು ಇದೇ ಮೊದಲು. ವಾಹನಗಳ ಓಡಾಟದಿಂದ ಈ ರೀತಿಯ ಘಟನೆ ಆಗಿರಬಹುದು. ಅಗ್ನಿಶಾಮಕ ದಳದ ಸಿಬ್ಬಂದಿಗಳು ತುರ್ತಾಗಿ ಸ್ಪಂದಿಸಿದರು. ಗ್ರಾಮಸ್ಥರು ಸಹ ನೆರವು ನೀಡಿದ ಕಾರಣ ಹೆಚ್ಚಿನ ಅನಾಹುತವನ್ನು ತಪ್ಪಿಸಲು ಸಾಧ್ಯವಾಯಿತು” ಎಂದು ಉಪ ವಲಯ ಅರಣ್ಯಾಧಿಕಾರಿ ಅಲ್ತಾಫ್‌ ಚೌಕಡಾಕ್‌ ಹೇಳಿದರು.

ಇದನ್ನೂ ಓದಿ: Karnataka Election : 150 ಸ್ಥಾನದ ಟಾರ್ಗೆಟ್‌ ಹೊತ್ತು ರಾಜ್ಯಕ್ಕೆ ಪ್ರವೇಶ ಮಾಡಿದೆ ಚುನಾವಣಾ ಉಸ್ತುವಾರಿ ಟೀಂ

Exit mobile version