Site icon Vistara News

Karnataka CM: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆ ಬೆನ್ನಲ್ಲೇ ಜನರಿಗೆ ಸೋನಿಯಾ ಗಾಂಧಿ ಸಂದೇಶ

Sonia Gandhi

Congress will not attend Ram Mandir inauguration, calls it BJP-RSS event

ಬೆಂಗಳೂರು/ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Karnataka CM), ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಸೇರಿ ಹಲವು ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು, ಸರ್ಕಾರ ರಚನೆ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಗ್ಯಾರಂಟಿಗಳ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ಪಡೆದಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ವಿಡಿಯೊ ಮೂಲಕ ಕರ್ನಾಟಕದ ಜನರಿಗೆ ಧನ್ಯವಾದ ತಿಳಿಸಿದ್ದಾರೆ.

“ನಮಸ್ಕಾರ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಗೆಲುವು ನೀಡಿದ ರಾಜ್ಯದ ಸಮಸ್ತ ಜನತೆಗೆ ಧನ್ಯವಾದಗಳು. ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡಿರುವುದು ಸಂತಸ ತಂದಿದೆ. ಜನರು, ಅದರಲ್ಲೂ ಬಡವರ ಏಳಿಗೆಗೆ ನೂತನ ಸರ್ಕಾರ ಶ್ರಮಿಸಲಿದೆ. ರಾಜ್ಯದ ಜನರು ವಿಭಜಿತ ಮನಸ್ಸಿನ ರಾಜಕಾರಣವನ್ನು, ಭ್ರಷ್ಟಾಚಾರವನ್ನು ಮೆಟ್ಟಿನಿಂತು, ಜನರ ಪರವಾದ ಕಾಂಗ್ರೆಸ್‌ ಆಡಳಿತವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ” ಎಂದು ಹೇಳಿದರು.

ಸೋನಿಯಾ ಗಾಂಧಿ ವಿಡಿಯೊ ಸಂದೇಶ

“ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು ಜನರಿಗೆ ನೀಡಿದ ಎಲ್ಲ ಐದು ಗ್ಯಾರಂಟಿಗಳನ್ನು ಈಡೇರಿಸಲು ಬದ್ಧವಾಗಿದೆ ಎಂದು ಹೇಳಲು ಇಚ್ಛಿಸುತ್ತೇನೆ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳ ಜಾರಿಗೆ ತೀರ್ಮಾನ ತೆಗೆದುಕೊಂಡಿರುವುದನ್ನು ನೋಡಿದರೆ ನನಗೆ ಹೆಮ್ಮೆ ಎನಿಸುತ್ತಿದೆ. ಮುಂದಿನ ದಿನಗಳಲ್ಲೂ ಕರ್ನಾಟಕದ ಏಳಿಗೆ, ಜನರ ಕಲ್ಯಾಣ, ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಕಾಂಗ್ರೆಸ್‌ ಶ್ರಮಿಸಲಿದೆ” ಎಂದು ಭರವಸೆ ನೀಡಿದರು.

ಇದನ್ನೂ ಓದಿ: Karnataka CM: ಒಂದೇ ಸಭೆಯಲ್ಲಿ 10,000 ಕೋಟಿ ರೂ. ಉಳಿಸಿದ ಸಿದ್ದರಾಮಯ್ಯ!: ಗ್ಯಾರಂಟಿ ಜಾರಿ ಹೀಗಿರಲಿದೆಯೇ?

ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಅವರು ಪದಗ್ರಹಣ ಮಾಡಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌, ಖ್ಯಾತ ನಟ ಕಮಲ್‌ ಹಾಸನ್‌ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಆದೇಶವನ್ನೂ ಹೊರಡಿಸಲಾಗಿದೆ. ಆ ಮೂಲಕ ಆರಂಭದಲ್ಲಿಯೇ ಜನರ ವಿಶ್ವಾಸ ಗಳಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ.

Exit mobile version