Site icon Vistara News

Oommen Chandy: ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ

Oommen Chandy

ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್​ ಚಾಂಡಿ (Oommen Chandy) ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 79ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ತೀರಿಕೊಂಡಿದ್ದಾಗಿ ಉಮ್ಮನ್​ ಚಾಂಡಿ ಕುಟುಂಬದವರು ತಿಳಿಸಿದ್ದಾರೆ. ಹಾಗೇ, ಕಾಂಗ್ರೆಸ್​ ಕೇರಳ ರಾಜ್ಯಾಧ್ಯಕ್ಷ ಕೆ.ಸುಧಾಕರನ್​ ಅವರೂ ಉಮ್ಮನ್​ ಚಾಂಡಿ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Nithya Menen: ನಿತ್ಯಾ ಮೆನನ್ ಅಜ್ಜಿ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ!

ಉಮ್ಮನ್ ಚಾಂಡಿ ಅವರು ಕೇರಳದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಡಳಿತ ನಡೆಸಿದ್ದಾರೆ. ಮೊದಲನೇದಾಗಿ 2004ರಿಂದ 2006ರವರೆಗೆ ಮತ್ತು 2011ರಿಂದ 2016ರವರೆಗೆ. ಮೊಟ್ಟಮೊದಲು ಅವರು ಶಾಸಕನಾಗಿದ್ದು 1970ರಲ್ಲಿ. ಆಗ 27ನೇ ವರ್ಷ ವಯಸ್ಸಿನಲ್ಲಿದ್ದ ಅವರು ಕೇರಳ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದಿದ್ದರು. ಅದಾದ ಮೇಲೆ ನಿರಂತರವಾಗಿ 11 ಚುನಾವಣೆಗಳಲ್ಲಿ ಗೆದ್ದರು. ಐದು ದಶಕಗಳ ಕಾಲ ಅವರು ತಮ್ಮ ಸ್ವಕ್ಷೇತ್ರ ಪುತುಪಲ್ಲಿಯಲ್ಲಿ ಗೆದ್ದರು. ಈ ಮೂಲಕ ಒಂದು ಕ್ಷೇತ್ರವನ್ನು ಐದು ದಶಕಗಳ ಕಾಲ ಪ್ರತಿನಿಧಿಸಿದ ಹಿರಿಯ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ 2022ರಲ್ಲಿ ಪಾತ್ರರಾದರು. ಉಮ್ಮನ್​ ಚಾಂಡಿ ಅವರು ಕೇರಳದಲ್ಲಿ ನಾಲ್ಕು ಬಾರಿ ಸಚಿವರಾಗಿ ವಿವಿಧ ಖಾತೆ ನಿಭಾಯಿಸಿದ್ದಾರೆ.

Exit mobile version