Site icon Vistara News

Amrit Mahotsav | ಬನಹಟ್ಟಿಯಲ್ಲಿ ಮಾಜಿ ಶಾಸಕಿ ಉಮಾಶ್ರೀ, ಮೀನಾಕ್ಷಿ ಭರ್ಜರಿ ಸ್ಟೆಪ್ಸ್

Amrit Mahotsav

ಬಾಗಲಕೋಟೆ: ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav) ನಿಮಿತ್ತ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ, ನಟಿ ಉಮಾಶ್ರೀ ಹಾಗೂ ಹಾಲಿ ಶಾಸಕ ಸಿದ್ದು ಸವದಿ ಅವರ ಪತ್ನಿ ಮೀನಾಕ್ಷಿ ಪರಸ್ಪರ ಕೈ ಕೈ ಹಿಡಿದು ತಮಟೆ ಸದ್ದಿನ ತಾಳಕ್ಕೆ ತಕ್ಕಂತೆ ಭರ್ಜರಿ ಸ್ಟೆಪ್‌ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಸೋಮವಾರ ಮಹಿಳಾ ಒಕ್ಕೂಟದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನೂರಾರು ಮಹಿಳೆಯರು ಭಾಗವಹಿಸಿ ತ್ರಿವರ್ಣ ಧ್ವಜಗಳೊಂದಿಗೆ ಮೆರವಣಿಗೆ ನಡೆಸುವಾಗ ಮಾಜಿ ಸಚಿವೆ, ನಟಿ ಉಮಾಶ್ರೀ ಹಾಗೂ ಹಾಲಿ ಶಾಸಕ ಸಿದ್ದು ಸವದಿ ಅವರ ಪತ್ನಿ ಮೀನಾಕ್ಷಿ ತಮಟೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.

ಇದನ್ನೂ ಓದಿ | KMF product | ಬರಲಿದೆ ಕೆಎಂಎಫ್‌ ನಂದಿನಿ ಪಿಜ್ಜಾ; ಮೈಸೂರು ಜಂಬೂ ಸವಾರಿಯಲ್ಲಿ ಟ್ಯಾಬ್ಲೋ

Exit mobile version