ತುಮಕೂರು: ಇಲ್ಲಿನ ತಿಪ್ಪನಹಳ್ಳಿಯ ರಾಮಗೊಂಡನಹಳ್ಳಿ ಗ್ರಾಮದ ಯುವ ರೈತರೊಬ್ಬರು ಆತ್ಮಹತ್ಯೆಗೆ (Former Suicide Case) ಯತ್ನಿಸಿರುವ ಘಟನೆ ನಡೆದಿದೆ. ಅರಣ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಯುವ ರೈತ ನಾಗೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗ್ರಾಮದ ಲಕ್ಷ್ಮಯ್ಯ ಮತ್ತು ಲಕ್ಷ್ಮಿದೇವಮ್ಮ ಪುತ್ರ ನಾಗೇಶ್‌ರನ್ನು ಸರ್ವೇ ನಂ.35ರ 3 ಎಕರೆ 20 ಗುಂಟೆ ಜಮೀನು ವಿಚಾರದಲ್ಲಿ, ಅರಣ್ಯಾಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಕ್ಕಲೆಬ್ಬಿಸದಂತೆ ಕೋರ್ಟ್ ಆದೇಶವಿದ್ದರೂ ಅದನ್ನು ಅಧಿಕಾರಿಗಳು ಧಿಕ್ಕರಿಸುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ 15 ದಿನಗಳಿಂದಲೂ ತೀವ್ರ ಕಿರುಕುಳ ನೀಡುತ್ತಿದ್ದಾರಂತೆ. ಹೀಗಾಗಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ನಾಗೇಶ್ ಯತ್ನಿಸಿದ್ದಾರೆ. ಆದರೆ, ಇದನ್ನು ತಪ್ಪಿಸಬೇಕಾದ ಅಧಿಕಾರಿಗಳು, ನೀರು ಕುಡಿಯುತ್ತಿದ್ದಾನೆ, ಹೊಟ್ಟೆ ತುಂಬಾ ಕುಡಿಯಲಿ ಬಿಡಿ ಎಂದು ಅಧಿಕಾರಿಗಳು ಹೇಳಿದ್ದಾರೆಂಬ ಆರೋಪ ಕೇಳಿಬಂದಿದೆ.
ವಿಷ ಸೇವಿಸಿದ ರೈತ ನಾಗೇಶ್ ಅಸ್ವಸ್ತರಾಗುತ್ತಿದ್ದಂತೆ ತಕ್ಷಣ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ನಾಗೇಶ್‌ಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಕುಟುಂಬಸ್ಥರು ಅಧಿಕಾರಿಗಳು ಜಾತಿ ನಿಂದನೆ, ಕಿರುಕುಳು ಮಾಡಿದ್ದಾರೆ ಎಂದು ಆರೋಪಿಸಿ ಎಸ್‌ಸಿ, ಎಸ್‌ಟಿ ಸೆಲ್‌ಗೂ ದೂರು ನೀಡಿದ್ದಾರೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road accident | ರಿಪ್ಪನ್‌ಪೇಟೆ ಸಮೀಪ ಕಾರು ಪಲ್ಟಿ: ನಾಲ್ವರು ಯಾತ್ರಿಕರು ಅಪಾಯದಿಂದ ಪಾರು, ಜೀವ ಉಳಿಸಿದ ಏರ್ ಬ್ಯಾಗ್