ಉಡುಪಿ: ಬೈಂದೂರು ತಾಲೂಕಿನ (Udupi accident) ಶಿರೂರು ಟೋಲ್ ಗೇಟ್‌ನಲ್ಲಿ ವೇಗದಿಂದ ಬಂದ ಆಂಬ್ಯುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದ ನಾಲ್ವರ ಮೃತದೇಹವನ್ನು ಸಂಬಂಧಿಕರು ಹೊನ್ನಾವರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಒಬ್ಬ ಟೋಲ್ ಸಿಬ್ಬಂದಿ ಹಾಗೂ ಆಂಬ್ಯುಲೆನ್ಸ್‌ನಲ್ಲಿದ್ದ ಒಬ್ಬರಿಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆಂಬ್ಯುಲೆನ್ಸ್‌ನಲ್ಲಿದ್ದ ಮತ್ತೋರ್ವ ಮಹಿಳೆಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಆಂಬ್ಯುಲೆನ್ಸ್ ಚಾಲಕ ಚಿಕಿತ್ಸೆ ಪಡೆದು ಹೊನ್ನಾವರಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | Udupi accident | ಟೋಲ್‌ಗೆ ಆಂಬುಲೆನ್ಸ್ ಡಿಕ್ಕಿ: ನಾಲ್ವರು ದುರ್ಮರಣ, ಚಾಲಕ ಪವಾಡಸದೃಶ ಪಾರು
ಈ ಕುರಿತು ಶಿರೂರು ಟೋಲ್ ಗೇಟ್ ಸಿಬ್ಬಂದಿ ಸಂಜು ಪಾಂಡವ್ ಹಾಗೂ ಗಾಯಾಳು ಸಿಬ್ಬಂದಿ ಶಂಬಾಜಿ ಗೋರ್ಪಡೆ ಮಾತನಾಡಿ ʻ500 ಮೀಟರ್ ದೂರದಲ್ಲಿ ಆಂಬ್ಯುಲೆನ್ಸ್ ಬರುತ್ತಿರುವಾಗಲೇ ಬ್ಯಾರಿಕೇಡ್ ತೆರವು ಮಾಡಿದ್ದೆವು. ಆಂಬ್ಯುಲೆನ್ಸ್ ಬರುವ ರಸ್ತೆಯಲ್ಲಿ ಇದ್ದ ಹಸುವನ್ನು ಓಡಿಸಿದ್ದೆವು. ಆದರೆ, ಚಾಲಕ ವೇಗವಾಗಿದ್ದಿದ್ದಲ್ಲದೆ, ಬ್ರೇಕ್ ಹಾಕುವಲ್ಲಿ ವ್ಯತ್ಯಾಸವಾಗಿರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಅಪಘಾತದಲ್ಲಿ ರೋಗಿ, ರೋಗಿಯ ಪತ್ನಿ ಮತ್ತು ಇಬ್ಬರು ಸಂಬಂಧಿಕರು ಮೃತಪಟ್ಟಿದ್ದರೆ, ಚಾಲಕ, ಆಂಬ್ಯುಲೆನ್ಸ್ ಸಹಾಯಕ, ಒಳಗಿದ್ದ ಇನ್ನೊಬ್ಬ ಮಹಿಳೆ ಮತ್ತು ಒಬ್ಬ ಟೋಲ್ ಸಿಬ್ಬಂದಿ ಗಾಯಗೊಂಡಿದ್ದು, ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ | ಬೆಂಗಳೂರಿನ ಹೆಬ್ಬಾಳ ಬಳಿ ಸರಣಿ ಅಪಘಾತ, ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕರು