Site icon Vistara News

Amarnath Yatra: ಅಮರನಾಥ ಯಾತ್ರೆಗೆ ತೆರಳಿದ್ದ ಯಾದಗಿರಿಯ ನಾಲ್ವರು ಯಾತ್ರಿಗಳು ಸೇಫ್‌

Pilgrims from Yadgir

ಯಾದಗಿರಿ: ಅಮರನಾಥ ಯಾತ್ರೆಗೆ ತೆರಳಿದ್ದ ಯಾದಗಿರಿ ಜಿಲ್ಲೆಯ ನಾಲ್ವರು ಯಾತ್ರಿಗಳು ಸುರಕ್ಷಿತವಾಗಿದ್ದು, ಮಂಗಳವಾರ ಬೆಳಗ್ಗೆ ಅಮರನಾಥನ ದರ್ಶನ ಪಡೆಯಲು ತೆರಳಲಿದ್ದಾರೆ. 6 ದಿನಗಳ ಹಿಂದೆ ಜಿಲ್ಲೆಯ ಸುರಪುರದಿಂದ ನಾಲ್ವರು ಯಾತ್ರಿಗಳು, ಅಮರನಾಥ ಯಾತ್ರೆಗೆ (Amarnath Yatra) ಹೋಗಿದ್ದರು. ಇದೀಗ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಯಾದಗಿರಿ ಜಿಲ್ಲೆಯ ಸುರಪುರದಿಂದ ಶಿವರುದ್ರ ಸತ್ಯಂಪೇಟೆ, ಆದಿಶೇಷ ನೀಲಗಾರ, ಈಶ್ವರ ನಾಲವತ್ತವಾಡ, ಆದಯ್ಯ ಹೊನ್ನಳ್ಳಿ ಎಂಬುವವರು ಅಮರನಾಥ ಯಾತ್ರೆಗೆ ತೆರಳಿದ್ದರು. ಹವಾಮಾನ ವೈಪರೀತ್ಯದಿಂದ ಭಾರಿ ಮಳೆ ಹಾಗೂ ಭೂ ಕುಸಿತದಿಂದ ಯಾತ್ರೆ ಮಾರ್ಗದಲ್ಲಿ ಕನ್ನಡಿಗರು ಸೇರಿ ಸಾವಿರಾರು ಯಾತ್ರಿಗಳು ಅಪಾಯದಲ್ಲಿ ಸಿಲುಕಿದ್ದರು. ನಂತರ ಯಾತ್ರಿಗಳನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರು. ಮಳೆ ಕಡಿಮೆಯಾಗಿದ್ದರಿಂದ ಭಕ್ತರಿಗೆ ಅಮರನಾಥನ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ | Amarnath Yatra : ಅಮರನಾಥ ಯಾತ್ರಾರ್ಥಿಗಳು ಅತಂತ್ರ; ಕನ್ನಡಿಗರ ಏರ್‌ಲಿಫ್ಟ್‌

ದೇವರ ದರ್ಶನ ಪಡೆಯಲು ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಯಾದಗಿರಿಯ ಯಾತ್ರಿಗಳು, ಸದ್ಯ ಜಮ್ಮು ಮತ್ತು ಕಾಶ್ಮೀರದ ಪಂಚಕರ್ಣಿ ಸ್ಥಳದಲ್ಲಿ ಇದ್ದು, ಮಂಗಳವಾರ ಬೆಳಗ್ಗೆ ಅಮರನಾಥನ ದರ್ಶನಕ್ಕೆ ತೆರಳಲಿದ್ದಾರೆ.

Exit mobile version