ಗದಗ: ಕಾಡಿನಲ್ಲಿರಬೇಕಾದ ನರಿಯೊಂದು (Fox breaks into school) ಶಾಲಾ ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳಿಗೆ ಮನರಂಜನೆ ಜತೆಗೆ ಆತಂಕ ಸೃಷ್ಟಿ ಮಾಡಿದ್ದ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಶಾಲೆಗೆ ಏಕಾಏಕಿ ನರಿ ನುಗ್ಗಿದ ಪರಿಣಾಮ ವಿದ್ಯಾರ್ಥಿಗಳು ಕಂಗಾಲಾದರು. ನರಿ ಎಂಟ್ರಿಗೆ ಭಯಗೊಂಡು ವಿದ್ಯಾರ್ಥಿಗಳು ದಿಕ್ಕಾಪಾಲಾದರು. ಅಸುಂಡಿ ಗ್ರಾಮದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯು ಹೊರವಲಯದ ಕಪ್ಪತ್ತಗುಡ್ಡ ಸಮೀಪವೇ ಇದೆ. ಹೀಗಾಗಿ ನಾಡಿಗೆ ಬಂದಿದ್ದ ನರಿಯು ಶಾಲೆಯತ್ತ ಬಂದಿರಬಹುದು ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ಶಾಲೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ದೌಡಾಯಿಸಿದ್ದು, ಚಾಣಾಕ್ಷ ನರಿ ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಗದೆ ಕೆಲವು ಹೊತ್ತು ಓಡಾಟ ನಡೆಸಿದೆ. ಒಬ್ಬ ಸಿಬ್ಬಂದಿ ಧೈರ್ಯ ಮಾಡಿ, ನರಿಯನ್ನು ಹಿಡಿದು ಬಲೆಗೆ ಹಾಕಿದರು. ನಂತರ ನರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಿಡಿದುಕೊಂಡು ಹೋಗಿದರು. ಬಳಿಕ ವಿದ್ಯಾರ್ಥಿಗಳು ನಿರಾಳವಾದರು.
ಇದನ್ನೂ ಓದಿ | Work From Home | ವರ್ಕ್ ಫ್ರಮ್ ಹೋಮ್ 2023 ಡಿಸೆಂಬರ್ ತನಕ ವಿಸ್ತರಣೆ, ಟ್ಯಾಕ್ಸಿ ಕ್ಯಾಬ್, ಟ್ರಾವೆಲ್ಸ್ ವಲಯಕ್ಕೆ ಆತಂಕವೇನು?