ಕೊಪ್ಪಳ: ಗಂಡಸರು ಇಲ್ಲದ ಮನೆಯ ಬಳಿ ಹೋಗುವ ಈ ನಕಲಿ ಬುಡುಬುಡಿಕೆಗಳು ಮಹಿಳೆಯರಿಂದ ಹಣ ಕಸಿಯುತ್ತಿದ್ದರು ಎಂಬ (Fraud Case) ಆರೋಪ ಕೇಳಿ ಬಂದಿದ್ದು, ಇಲ್ಲಿನ ಗಡಿಯಾರ ಕಂಬ ಸರ್ಕಲ್ ಸಮೀಪ ಇಬ್ಬರು ಬುಡುಬುಡಿಕೆಯವರಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.
ಗಂಡಸರು ಮನೆಗಳಲ್ಲಿ ಇಲ್ಲದ ಸಮಯ ನೋಡಿಕೊಂಡು ಹಾಗೂ ಒಂಟಿ ಮಹಿಳೆಯರೇ ಇರುವಂತಹ ಮನೆಗಳನ್ನು ಹುಡುಕುತ್ತಿದ್ದರು. ಮನೆಯ ಸದಸ್ಯರು ಹೊರ ಹೋಗುತ್ತಿದ್ದಂತೆ ಮನೆ ಬಾಗಿಲ ಮುಂದೆ ನಿಲ್ಲುತ್ತಿದ್ದರು. ಬಳಿಕ ಮಹಿಳೆಯರ ಮುಂದೆ ಇಲ್ಲ ಸಲ್ಲದ ಭವಿಷ್ಯವನ್ನು ಹೇಳುತ್ತಾ, ಅವರು ಭಯಗೊಳ್ಳುವಂತೆ ಮಾಡಿ, ನಂಬಿಸಿ ಹಣ ಕೇಳುತ್ತಿದ್ದರು. ಗ್ರಾಮದಲ್ಲಿ ತಲಾ 5 ಸಾವಿರ ರೂಪಾಯಿಯಂತೆ ಸುಮಾರು 10ಕ್ಕೂ ಹೆಚ್ಚು ಮಹಿಳೆಯರಿಂದ ಹಣ ಲಪಟಾಯಿಸಿದ್ದಾರೆ.
ಬುಡುಬುಡಿಕೆ ವೇಷ ಹಾಕಿಕೊಂಡು ಬಂದಿದ್ದ ಇಬ್ಬರಿಂದ ವಂಚನೆ ನಡೆಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಸ್ಥಳೀಯರೆಲ್ಲರೂ ಸೇರಿ ಸೋಮವಾರ ಹಿಗ್ಗಾಮುಗ್ಗಾ ಥಳಿಸಿ, ಥರಾಟೆಗೆ ತೆಗೆದುಕೊಂಡಿದ್ದಾರೆ. ಆ ಬಳಿಕ ಬುಡುಬುಡಿಕೆಯವರನ್ನು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ವೇಳೆ ಹಣ ಪಡೆದಿರುವುದನ್ನು ಇವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಯೆಸ್ ಇವನೇ ತೀರ್ಥಹಳ್ಳಿ ಮೂಲದ ಉಗ್ರ ಶಾರಿಕ್: ಎಡಿಜಿಪಿ ಅಲೋಕ್ ಕುಮಾರ್ ಬಹಿರಂಗ