Site icon Vistara News

Vijayanagara News: ಜಂಗಮ ತುಂಬಿಗೆರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Free health checkup camp at Jangama Tumbigere village at Harapanahalli

ಹರಪನಹಳ್ಳಿ: ತಾಲೂಕಿನ ಜಂಗಮ ತುಂಬಿಗೆರೆ ಗ್ರಾಮದ ಸರ್ಕಾರಿ ಶಾಲಾ (Govt School) ಆವರಣದಲ್ಲಿ ಭಾನುವಾರ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು (Free health checkup camp) ಹಮ್ಮಿಕೊಳ್ಳಲಾಗಿತ್ತು.

ಕಾಯಕ್ರಮವನ್ನು ಡಾ. ರವಿ ಕುಮಾರ್ ಉದ್ಘಾಟಿಸಿದರು, ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಸ್ಟಾಪ್; ಕರಾವಳಿಯಲ್ಲಿ ನಾನ್‌ ಸ್ಟಾಪ್‌ ಮಳೆ

ಶಿಬಿರದಲ್ಲಿ ರಕ್ತದೊತ್ತಡ, ದಂತ, ಮಧುಮೇಹ, ಕೀಲು ಮೂಳೆ, ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಅಗತ್ಯ ಇರುವ ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು.

ಇದೇ ವೇಳೆ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 20 ಯೂನಿಟ್ ರಕ್ತ ಸಂಗ್ರಹವಾಯಿತು.

ಇದನ್ನೂ ಓದಿ:ಮಂಗಳೂರು ಸ್ಫೋಟ: ಐಐಎಸ್‌ಸಿ ದಾಳಿ ಆರೋಪಿಯೇ ಕುಕ್ಕರ್‌ ಬಾಂಬ್‌ಗೆ ತರಬೇತುದಾರ!

ಈ ಸಂದರ್ಭದಲ್ಲಿ ಮಾಜಿ ಶಾಸಕ ಗುರುಸಿದ್ದನ ಗೌಡ, ವೈದ್ಯ ಡಾ.ಶಾಹೀದ್, ಹಾಲಸ್ವಾಮಿ ಕಂಬಳಿ ಮಠ, ಸುದರ್ಶನ್, ನಿಖಿಲ್ ಮುಖಂಡರಾದ ಟಿ.ಶಿವಣ್ಣ, ನಾಗರಾಜ್, ಸಿದ್ದಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version