Site icon Vistara News

IAS Exam : ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ

IAS Exam

ಬೆಂಗಳೂರು: ಭವಿಷ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶವನ್ನು (IAS Exam) ‘ಧೀ ಅಕಾಡೆಮಿ’ ತೆರೆದಿಟ್ಟಿದೆ. ಬೆಂಗಳೂರಿನ ಚಂದ್ರಾಲೇ ಔಟ್ ನಲ್ಲಿರುವ ಈ ಸಂಸ್ಥೆ ಯುಪಿಎಸ್ ಸಿ ಪರೀಕ್ಷೆ ಬರೆಯುವ ಪ್ರತಿಯೊಬ್ಬ ಅಭ್ಯರ್ಥಿಗೂ ಕಳೆದೆರಡು ವರ್ಷಗಳಿಂದ ಅತ್ಯುತ್ತಮ ತರಬೇತಿ ನೀಡುತ್ತಾ ಬಂದಿದೆ. ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ತೇರ್ಗಡೆ ಹೊಂದಿ ಸಂಸ್ಥೆಗೆ ಗೌರವ ತಂದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ತರಬೇತಿ ನೀಡುವ ‘ಧೀ ಅಕಾಡೆಮಿ’ ಇತರೆ ಎಲ್ಲ ಸ್ಪರ್ಧಾತ್ಮಕ ತರಬೇತಿ ನೀಡುವ ಸಂಸ್ಥೆಗಳಿಗಿಂತ ಭಿನ್ನವಾಗಿ ಕೆಲಸ ನಿರ್ವಹಿಸುತ್ತಿದೆ ಅನ್ನೋದು ವಿಶೇಷ.

ದೂರದ ದಿಲ್ಲಿಗೆ ಹೋಗಿ ನಮ್ಮ ಕನ್ನಡಿಗ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಅಂತಹ ಅಭ್ಯರ್ಥಿಗಳು ನಮ್ಮ ಕರ್ನಾಟಕದಲ್ಲೇ ಉತ್ತಮ ಅವಕಾಶವನ್ನು ಪಡೆದುಕೊಳ್ಳಬೇಕು ಅನ್ನುವ ಸದುದ್ದೇಶದಿಂದ ‘ಧೀ ಅಕಾಡೆಮಿ’ಯನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ.

ತಜ್ಞರಿಂದ ತರಬೇತಿ

ರಾಜ್ಯದ ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ದಿಲ್ಲಿಯಿಂದ ನುರಿತ ತಜ್ಞರು ಬಂದು ತರಬೇತಿ ನೀಡುತ್ತಾರೆ. ಜೊತೆಗೆ ಇಲ್ಲಿಯ ಸಂಪನ್ಮೂಲ ವ್ಯಕ್ತಿಗಳು ಕೂಡ ಅಗತ್ಯ ಮಾಹಿತಿ, ಸಲಹೆ -ಸೂಚನೆ ನೀಡುವುದಕ್ಕೆ ಲಭ್ಯವಿದ್ದಾರೆ. ನಿವೃತ್ತ ಐಎಎಸ್ , ಐಪಿಎಸ್ ಅಧಿಕಾರಿಗಳೇ ಉಪನ್ಯಾಸವನ್ನು ಅಭ್ಯರ್ಥಿಗಳಿಗೆ ನೀಡಲಿದ್ದಾರೆ. ‘ಧೀ ಅಕಾಡೆಮಿ’ಗೆ ಈಗಾಗಲೇ ನೋಂದಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ 9844868662/9844868663 ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.

ಇದನ್ನೂ ಓದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಕಾವ್ಯಾ ಅನಂತ್, ‘ನಿಮ್ಮ ಕನಸನ್ನು ನನಸಾಗಿಸುವುದಕ್ಕೆ ‘ಧೀ ಅಕಾಡೆಮಿ’ ಅತ್ಯುತ್ತಮ ಆಯ್ಕೆ. ಬಡವರಿಗೆ ಉನ್ನತ ಹುದ್ದೆಗಳ ಕನಸು ಮರೀಚಿಕೆಯಾಗಿಯೇ ಉಳಿದಿದೆ. ಅಂತಹ ಸನ್ನಿವೇಶದಲ್ಲಿ ಅವರಿಗೆ ಉಚಿತ ತರಬೇತಿ ನೀಡುವುದಕ್ಕೆ ನಮಗೆ ಅತ್ಯಂತ ಖುಷಿಯಾಗುತ್ತದೆ. ಎಲ್ಲ ಮೂಲ ಸೌಕರ್ಯವನ್ನು ನಮ್ಮ ಸಂಸ್ಥೆ ಒಳಗೊಂಡಿದೆ. ನಿಮ್ಮ ಎಲ್ಲ ಕನಸುಗಳನ್ನು ನಮ್ಮ ಸಂಸ್ಥೆಯ ವೇದಿಕೆ ಮೂಲಕ ನನಸು ಮಾಡಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

ಬಡ ವಿದ್ಯಾರ್ಥಿಗಳ ಆಯ್ಕೆ ಹೇಗೆ..?

ಯುಪಿಎಸ್ ಸಿ ಪರೀಕ್ಷೆ ಬರೆದು ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನುವುದು ಎಲ್ಲರ ಕನಸಾಗಿರುತ್ತದೆ. ಆದರೆ ಹಣ ಇಲ್ಲ ಅನ್ನೋದೆ ದೊಡ್ಡ ಕೊರತೆ ಆಗಿರುತ್ತದೆ. ಅಂತಹ ಅಭ್ಯರ್ಥಿಗಳು ಯಾವುದೇ ಚಿಂತೆಗೆ ಒಳಗಾಗಬೇಕಿಲ್ಲ. ಪ್ರತಿಭೆ ಇರುವ ಅಭ್ಯರ್ಥಿಗಳನ್ನು ‘ಧೀ ಅಕಾಡೆಮಿ’ ಕೈ ಹಿಡಿಯಲಿದೆ. ಹಾಗಾದರೆ ನಿಮ್ಮ ಆಯ್ಕೆ ಹೇಗೆ ಅನ್ನೋದಕ್ಕೆ ಉತ್ತರ ಇಲ್ಲಿದೆ. ಧೀ ಅಕಾಡೆಮಿ ಬಡ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಅದರಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳ ತಂದೆ-ತಾಯಿಯ ಆದಾಯ ಸರ್ಟಿಫಿಕೇಟ್ ಪರಿಶೀಲನೆ ನಡೆಸಿದ ಬಳಿಕ ಉಚಿತ ತರಬೇತಿ ನೀಡಲಾಗುತ್ತದೆ.

ಧೀ ಅಕಾಡೆಮಿಯಲ್ಲಿ ತರಬೇತಿ ಪಡೆದು ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಸಂಸ್ಥೆ ಹೊಸ ಭರವಸೆಯನ್ನು ಹುಟ್ಟು ಹಾಕಿದೆ.

Exit mobile version