Site icon Vistara News

ವಿಶ್ವ ದರ್ಶನ ಸಂಸ್ಥೆಯಿಂದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ ಆರಂಭ; ಅರ್ಜಿ ಸಲ್ಲಿಕೆ ಶುರು

vishwadarshana media school Hariprakash konemane and Vijaya sankeshwara

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಶ್ವ ದರ್ಶನ ಎಜುಕೇಷನ್‌ ಸೊಸೈಟಿ ಆಶ್ರಯದಲ್ಲಿ, ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಅವರ ಮಾರ್ಗದರ್ಶನದಲ್ಲಿ ಯಶಸ್ವಿ ಉದ್ಯಮಿ, ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಚೇರ್ಮನ್‌ ಡಾ. ವಿಜಯ ಸಂಕೇಶ್ವರ ಅವರ ಹೆಸರಿನಲ್ಲಿ ಮೀಡಿಯಾ ಸ್ಕೂಲ್‌ ಆರಂಭವಾಗಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೋಮಾ ಕೋರ್ಸ್‌ ಇದಾಗಿದ್ದು, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಮಾನ್ಯತೆ ಪಡೆದಿದೆ.

ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಯುವ ಜನರನ್ನು ಆಲ್‌ರೌಂಡರ್‌ ಆಗಿ ಸಜ್ಜುಗೊಳಿಸುವುದು ಮತ್ತು ವೃತ್ತಿಪರವಾಗಿ ತರಬೇತಿಗೊಳಿಸುವುದು ನಮ್ಮ ಗುರಿಯಾಗಿದೆ. ಇದಕ್ಕೆ ಪೂರಕವಾಗಿ ಪಠ್ಯಕ್ರಮವನ್ನು ರೂಪಿಸಲಾಗಿದೆ. ಪ್ರಾಯೋಗಿಕ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಮುದ್ರಣ, ಟಿವಿ ಮತ್ತು ಡಿಜಿಟಲ್‌ ಈ ಮೂರೂ ವಿಭಾಗಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಅನುಭವಿ ಪತ್ರಕರ್ತರಿಂದ ಮತ್ತು ನುರಿತ ಅಧ್ಯಾಪಕರಿಂದ ಪಾಠ ಮಾಡಲಾಗುತ್ತದೆ ಎಂದು ವಿಶ್ವ ದರ್ಶನ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷರು ಮತ್ತು ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ತಿಳಿಸಿದ್ದಾರೆ.

ವಿಶ್ವದರ್ಶನ ಎಜುಕೇಶನ್‌ ಸೊಸೈಟಿ ಯಲ್ಲಾಪುರ

ಮಾಧ್ಯಮದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಪದವೀಧರರು ಅರ್ಜಿ ಸಲ್ಲಿಸಬಹುದು. ಹಿರಿಯ ಪತ್ರಕರ್ತ ನಾಗರಾಜ ಇಳೆಗುಂಡಿ ಅವರು ಈ ಮೀಡಿಯಾ ಸ್ಕೂಲ್‌ನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಾರೆ.

ಸಂಗ್ರಹ ಚಿತ್ರ

ಸುದ್ದಿ ಸಂಪಾದನೆ, ವರದಿಗಾರಿಕೆ, ಸಂವಹನ ಕೌಶಲ, ಟಿವಿಯಲ್ಲಿ ಆಕರ್ಷಕ ನಿರೂಪಣೆ, ಛಾಯಾಗ್ರಹಣ, ಆರ್‌ಜೆ, ವಿಜೆ, ಮಾಧ್ಯಮ ನಿರ್ವಹಣೆ, ವಿಡಿಯೊ ಎಡಿಟಿಂಗ್‌, ಗ್ರಾಫಿಕ್‌ ಡಿಸೈನ್‌, ಸೋಷಿಯಲ್‌ ಮೀಡಿಯಾ ಮತ್ತು ಡಿಜಿಟಲ್‌ ಮೀಡಿಯಾ ನಿರ್ವಹಣೆ ಇತ್ಯಾದಿ ಪ್ರಮುಖ ವಿಷಯಗಳ ಕುರಿತು ವಿಶೇಷ ತರಬೇತಿಯನ್ನು ನೀಡಲಾಗುವುದು.

ಸಂಗ್ರಹ ಚಿತ್ರ

ವೃತ್ತ ಪತ್ರಿಕೆ, ಟಿವಿ-ಡಿಜಿಟಲ್‌ ಮಾಧ್ಯಮಗಳಿಗೆ ಸಂಬಂಧಿಸಿದ ಪುಸ್ತಕಗಳು, ವಿಷಯ ತಜ್ಞರ ಜತೆ ಸಂವಾದ, ಪತ್ರಿಕಾ ಕಚೇರಿ-ಟಿವಿ ಕಚೇರಿ ಭೇಟಿ, ಅವುಗಳ ಕಾರ್ಯ ನಿರ್ವಹಣೆಯ ಪ್ರತ್ಯಕ್ಷ ಅನುಭವ, ಡಿಜಿಟಲ್‌ ಮಾಧ್ಯಮದ ಕಾರ್ಯ ಚಟುವಟಿಕೆಯ ಅವಲೋಕನ, ಮಾದರಿ ಪತ್ರಿಕೆ ಪ್ರಕಟಣೆ, ಇಂಟರ್ನ್‌ಶಿಪ್‌, ಆನ್‌ಲೈನ್‌ ಮತ್ತು ಭೌತಿಕ ಬೋಧನೆಯ ಹೈಬ್ರಿಡ್‌ ಮಾದರಿ ಸೇರಿದಂತೆ ಹಲವು ವಿಶೇಷತೆಗಳನ್ನು ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ ಹೊಂದಿದೆ.

ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ. ಜುಲೈ 10 ಕೊನೆಯ ದಿನವಾಗಿದೆ. ಆ ಬಳಿಕ ಅರ್ಹತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಕೋರ್ಸ್‌ಗೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಜಯ್‌ ಭಾರತೀಯ, ಮೊಬೈಲ್‌ ಸಂಖ್ಯೆ: 8904134073, 7337875279

ಇದನ್ನೂ ಓದಿ: ವಿಸ್ತಾರ ಅಂಕಣ: ದೇಶವನ್ನು ಹರಾಜು ಹಾಕಲು ಈ ರಾಜಕೀಯ ಪಕ್ಷಗಳಿಗೆ ಯಾರೂ ಅಧಿಕಾರ ಕೊಟ್ಟಿಲ್ಲ

Exit mobile version