Site icon Vistara News

Flower Show: ಶಿರಸಿ ತೋಟಗಾರಿಕಾ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಮೇಳ; ಜನರಿಗೆ ನೀಡುತ್ತಿದೆ ಮನೋರಂಜನೆ

Flower Show sirsi Horticulture Department

#image_title

ಶಿರಸಿ: ಉತ್ತರ ಕನ್ನಡದ ಶಿರಸಿ ತೋಟಗಾರಿಕಾ ಇಲಾಖೆಯಿಂದ (Horticulture Department) ಮೂರು ದಿನಗಳ ಕಾಲ ನಡೆಯಲಿರುವ ಫಲ ಪುಷ್ಪ ಪ್ರದರ್ಶನ ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಪುಷ್ಪ ರಂಗೋಲಿ, ಪುಷ್ಪ ಮಂಟಪ, ಹೂಗಳಿಂದ ಮಾಡಿದ ಟೆಡ್ಡಿ ಬೇರ್‌ ಗಳು ಹೆಚ್ಚು ಗಮನ ಸೆಳೆಯುತ್ತಿವೆ. ಉತ್ತರ ಕನ್ನಡ ಜಿಲ್ಲೆ‌ ಪ್ರವಾಸಿ ತಾಣಗಳಾದ ಯಾಣ, ಮಂಜುಗುಣಿ, ಮಾರಿಕಾಂಬಾ ದೇವಾಲಯಗಳು‌‌‌ ಜನರ ಮನ್ನಣೆಗೆ ಪಾತ್ರವಾಗಿವೆ. ಮರೆಯಲಾಗದ ಮಾಣಿಕ್ಯ ಪುನೀತ್ ರಾಜಕುಮಾರ್ ರಂಗೋಲಿ‌ಯ ಭಾವಚಿತ್ರ ಎಲ್ಲರ ಗಮನ‌ ಸೆಳೆಯಿತು.

ಕಳೆದ ಎರಡು ವರ್ಷದಿಂದ‌ ಕೊರೊನಾದಿಂದ ಸ್ಥಗಿತಗೊಂಡಿದ್ದ ಫಲ ಪುಷ್ಪ ಪ್ರದರ್ಶನದಿಂದ ಬೇಸತ್ತ ಶಿರಸಿಗರು ಈ ಭಾರಿ ಫಲ ಪುಷ್ಪ ಪ್ರದರ್ಶನದಲ್ಲಿ ಹೆಚ್ಚು‌ ಎಂಜಾಯ್ ಮಾಡುತ್ತಿದ್ದಾರೆ. ಹೂಗಳ ಅಲಂಕಾರ ಮಧ್ಯೆ‌ ನಿಂತು‌ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಇನ್ನು‌ ಹಲವು ಜಾತಿಯ ಹೂಗಳನ್ನು ಬಳಸಿಕೊಂಡು ನಲವತ್ತು ಅಡಿ ಉದ್ದ ಹಾಗೂ ಅಗಲದಲ್ಲಿ ಬಿಡಿಸಲಾಗಿರುವ ಫಲ ಪುಷ್ಪ ರಂಗೋಲಿಯಲ್ಲಿ ಬರೋಬ್ಬರಿ ಒಂದೂವರೆ ಕ್ವಿಂಟಾಲ್ ಪ್ರಮಾಣದ ಹೂ-ಹಣ್ಣುಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಗುಲಾಬಿ ಸೇರಿದಂತೆ ಇತರ ಪುಷ್ಪ ಬಳಸಿ ಟೆಡ್ಡಿ ಬೇರ್ ರಚಿಸಿದ್ದು, ಸೇವಂತಿಯಲ್ಲಿ ಅಣಬೆ ಕೂಡ ರೆಡಿ‌ ಮಾಡಲಾಗಿತ್ತು. ಮಹಿಳೆಯರು ಪುಷ್ಪ ರಂಗೋಲಿ ಬಿಡಿಸಿ ನೋಡುಗರ ಗಮನ ಸೆಳೆದರು.

ಇದನ್ನೂ ಓದಿ: Kids Today Are Growing Up Way Too Fast: ಇತ್ತೀಚೆಗೆ ಮಕ್ಕಳೇಕೆ ಬಲುಬೇಗ ಪ್ರೌಢರಾಗುತ್ತಿದ್ದಾರೆ?

ಮೇಳದಲ್ಲಿ ಕೇವಲ ಸೇವಂತಿ, ಜರ್ಬೆರ, ಗ್ಲಾಡಿಯೋಲಸ್ ಮಾತ್ರವಲ್ಲ ಮ್ಯಾರಿಗೋಲ್ಡ್ ಸೇರಿ ೩೦ಕ್ಕೂ ಬಗೆಯ ಹಲವು ಪುಷ್ಪಗಳು ಗಮನ ಸೆಳೆದವು. ಅನೇಕ ವೈವಿಧ್ಯಮಯ ಹೂವುಗಳನ್ನು ಪೂನಾ, ಬೆಂಗಳೂರಿನಿಂದಲೂ ತರಿಸಲಾಗಿದೆ. ಹೂಗಳಿಂದಲೇ ಬಿಡಿಸಿದ ರಂಗೋಲಿ ಅತಿ ಹೆಚ್ಚು ಆಕರ್ಷಣೀಯವಾಗಿದೆ. ಗಜ ಗಾತ್ರದ ಫಲಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ತೋಟದ ಸೀಮೆಗಳೆಂದೆ ಕರೆಯುವ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳ ಅಡಕೆ ಗೊನೆ, ತೆಂಗು, ಬಗೆಬಗೆಯ ಮಾವು, ವೀಳ್ಯದೆಲೆ, ತರೇವಾರಿ ಕಾಳು ಮೆಣಸುಗಳು, ಪಪ್ಪಾಯಿ, ಗೆಡ್ಡೆ ಗೆಣಸು ಸೇರಿದಂತೆ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳು ನೋಡುಗರನ್ನು ಸೆಳೆಯುತ್ತಿವೆ. ನಗರ ಪ್ರದೇಶಗಳಲ್ಲಿ ಮನೆಯ ಮುಂದೆ ಹೆಚ್ಚು ಸ್ಥಳಾವಕಾಶ ಇಲ್ಲದ ಕಾರಣ ಮನೆಯ ಟೆರೇಸ್ ಮೇಲೆಯೇ ಕೈದೋಟ ನಿರ್ಮಿಸಲು ಗೃಹಿಣಿಯರನ್ನು ಪ್ರೋತ್ಸಾಹಿಸಲೆಂದು ಟೆರೇಸ್ ಗಾರ್ಡನ್ ಮಾದರಿಯನ್ನು ಕೂಡ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ: Sindhuri Vs Roopa : ಸಿಂಧೂರಿ ಮೇಲೆ ಯಾವ ಕ್ರಮವೂ ಆಗುತ್ತಿಲ್ಲ ಯಾಕೆ, ಅವರನ್ನು ರಕ್ಷಿಸುತ್ತಿರುವವರು ಯಾರು?: ರೂಪಾ ಪ್ರಶ್ನೆ

ಸತತ ಹದಿನೈದು ವರ್ಷದಿಂದ ಫಲ, ಪುಷ್ಪ ಪ್ರದರ್ಶನ ಹಮ್ಮಿಕೊಳ್ಳುತ್ತಾ ಬಂದಿರುವ ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ವಿನೂತನ ಬಗೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳತ್ತದೆ. ಹೂಗಳಿಂದ ಬಗೆ ಬಗೆ ವಿನ್ಯಾಸ ಚಿತ್ರಿಸೋ ಇಲಾಖೆಯು ಇದೀಗ ಕ್ಟಿಂಟಾಲ್ ಗಟ್ಟಲೆ ಹೂಗಳನ್ನು ಪ್ರದರ್ಶನದಲ್ಲಿ‌ ಬಳಕೆ ಮಾಡಿದೆ. ಮೂರು ದಿನ ನಡೆಯುವ ಫಲ ಪುಷ್ಪ ಮೇಳ ಜನರಿಗೆ ಮನೋರಂಜನೆ ನೀಡಿದೆ. ವಾರಾಂತ್ಯದಲ್ಲಿ ನಡೆಯುತ್ತಿರುವುದರಿಂದ ಜನಾಕರ್ಷಣೆ ಕೇಂದ್ರವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: Grapes For Diabetics: ಮಧುಮೇಹಿಗಳು ದ್ರಾಕ್ಷಿ ತಿನ್ನಬಹುದೇ? ತಿಂದರೆ ಏನಾಗುತ್ತದೆ?

Exit mobile version