ವಿಜಯನಗರ: ಹಂಪಿಯಲ್ಲಿ (Hampi) 3 ದಿನಗಳ ಕಾಲ ನಡೆದ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯು (G 20 Summit) ಬುಧವಾರ ನಡೆದ ಚರ್ಚೆಯ ಮೂಲಕ ಅಧಿಕೃತವಾಗಿ ತೆರೆ ಬಿದ್ದಿದೆ. ಗುರುವಾರದಿಂದ ಶೆರ್ಪಾ ಸಭೆಗಳು ಆರಂಭಗೊಳ್ಳಲಿವೆ.
ಕಳೆದ ಜು. 10ರ ಸೋಮವಾರದಿಂದ ಆರಂಭಗೊಂಡಿದ್ದ ಸಭೆಯಲ್ಲಿ ಭಾರತವು ಸೇರಿದಂತೆ 19 ಸದಸ್ಯ ರಾಷ್ಟ್ರಗಳು, 9 ಅತಿಥಿ ರಾಷ್ಟ್ರಗಳು ಹಾಗೂ 4 ಅಂತಾರಾಷ್ಟ್ರೀಯ ಸಂಸ್ಥೆಯ ಅತ್ಯುನ್ನತ ಪ್ರತಿನಿಧಿಗಳ ನೇತೃತ್ವದಲ್ಲಿ ಪ್ರತಿ ದಿನ ಎರಡು ಹಂತಗಳಲ್ಲಿ ಚರ್ಚೆಗಳನ್ನು ನಡೆಸಲಾಯಿತು.
ಇದನ್ನೂ ಓದಿ: Wimbledon 2023: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ
ಬುಧವಾರ ನಡೆದ ಚರ್ಚೆಯಲ್ಲಿ 3ನೇ ಸಾಂಸ್ಕೃತಿಕ ಕಾರ್ಯಕಾರಿ ಸಭೆಯ ಅಂತಿಮ ಅಧಿವೇಶನವು ಆ.26ರಂದು ವಾರಾಣಸಿಯಲ್ಲಿ ನಡೆಯಲಿದ್ದು, ಸಮಾರೋಪ ಸಭೆಯ ನವೀಕರಣ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕ್ರಮಗಳ ಬಗ್ಗೆ ಚರ್ಚೆ ಕೈಗೊಳ್ಳುವುದರ ಮೂಲಕ ಮುಕ್ತಾಯಗೊಳಿಸಲಾಯಿತು.
ಹಂಪಿಯ ಹಜಾರರಾಮ ದೇವಸ್ಥಾನದಲ್ಲಿ ಬುಧವಾರ ಜಿ-20 ಅತ್ಯುನ್ನತ ಪ್ರತಿನಿಧಿಗಳು ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರತಿನಿಧಿಗಳಿಗೆ ಸೂರ್ಯೋದಯದ ಸಮಯದಲ್ಲಿ ವಿವಿಧ ಆಸನಗಳು ಹಾಗೂ ಅವುಗಳ ಪ್ರಮುಖ್ಯತೆ ಕುರಿತು ಮಾಹಿತಿ ನೀಡಿಲಾಯಿತು. ಬುಧವಾರ ಮಧ್ಯಾಹ್ನದ ವೇಳೆಯಲ್ಲಿ ಜಿ-20 ಮೂರನೇ ಸಾಂಸ್ಕೃತಿಕ ಕಾರ್ಯಕಾರಿ ತಂಡ ಮರಳಿತು.
ಇದನ್ನೂ ಓದಿ: Gruhajyoti scheme : ಉಚಿತ ವಿದ್ಯುತ್‌ಗೆ ನೀವಿನ್ನೂ ಅರ್ಜಿ ಹಾಕಿಲ್ಲವೇ? ಜುಲೈ 27 ಲಾಸ್ಟ್ ಡೇಟ್!
ಗುರುವಾರದಿಂದ ಶೆರ್ಪಾ ಸಭೆ ನಡೆಯಲಿದ್ದು, ಜಿ-20ಯ ವಿವಿಧ ರಾಷ್ಟ್ರಗಳ ಶೆರ್ಪಾ ಪ್ರತಿನಿಧಿಗಳು ಹಂಪಿಗೆ ಆಗಮಿಸಲಿದ್ದಾರೆ.