Site icon Vistara News

G 20 Summit: ಜಿ-20 ಪ್ರತಿನಿಧಿಗಳ ಮನಸೂರೆಗೊಳಿಸಿದ ಸಾಂಸ್ಕೃತಿಕ ಪ್ರದರ್ಶನ

Various cultural events were held in Hampi

ವಿಜಯನಗರ: ಹಂಪಿಯಲ್ಲಿ ನಡೆಯುತ್ತಿರುವ ಜಿ 20 ಶೆರ್ಪಾ ಸಭೆಯ (G 20 Sherpa meeting) ಬಳಿಕ ಆಯೋಜಿಸಿದ್ದ ಸ್ಮಾರಕಗಳ ವೀಕ್ಷಣೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಜಿ 20 ಪ್ರತಿನಿಧಿಗಳಿಗಳಿಗೆ (Delegates) ವಿಜಯವಿಠ್ಠಲ ದೇವಸ್ಥಾನದ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.

ವಿಜಯವಿಠ್ಠಲ ದೇವಸ್ಥಾನದ ವಿಶಾಲ ಮಾರ್ಗದಲ್ಲಿ ನಡೆದು ಬರುತ್ತಿದ್ದ ಅತ್ಯುನ್ನತ ಪ್ರತಿನಿಧಿಗಳಿಗೆ ನಗಾರಿ ಬಾರಿಸುವ ಮೂಲಕ ಸ್ವಾಗತ ಕೋರಲಾಯಿತು. ವಿಜಯವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಬರುತ್ತಿದ್ದಂತೆ ಕಹಳೆ ಊದಿ ಸ್ವಾಗತಿಸಲಾಯಿತು.

ಇದನ್ನೂ ಓದಿ: ACC Emerging Asia Cup 2023: ಯಶ್‌ ಧುಲ್‌ ಶತಕ; ಭಾರತಕ್ಕೆ ಗೆಲುವಿನ ಶುಭಾರಂಭ

ಮಂಟಪದಲ್ಲಿ ಕಲಾವಿದರು ಜಾನಪದ ಗೀತೆಗೆ ಕೋಲಾಟ ಪ್ರದರ್ಶಿಸಿದರು. ಖ್ಯಾತ ಜಾನಪದ ಗಾಯಕಿ ಶಿಲ್ಪಾ ಮುಡಬಿ ಅವರಿಂದ “ಆರತಿ ಬೆಳಗಿರಿ ಕಾರುಣ್ಯ ಮೃಢ ಹರನಿಗೆ” ಎಂಬ ಜಾನಪದ ಹಾಡಿನ ಮೂಲಕ ಅತಿಥಿಗಳನ್ನು ವಿಜಯವಿಠಲ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ವಿಜಯವಿಠ್ಠಲ ದೇವಸ್ಥಾನದ ಆವರಣದ ಪ್ರತಿ ಮಂಟಪದ ಕಲಾವಿದರು ತಮ್ಮ ಕಲಾ ಪ್ರದರ್ಶನ ನಡೆಸಿಕೊಟ್ಟರು. ಭರತ್ಯ ನಾಟ್ಯ, ಮೊಹಿನಿಯಾಟ್ಟಂ, ಓಡಿಸ್ಸಿ, ಕುಚುಪುಡಿ ನೃತ್ಯಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ನಂತರ ಪ್ರತಿನಿಧಿಗಳಿಗೆ ಕಲ್ಲಿನ ರಥ, ಸಪ್ತ ಸ್ವರ ಮಂಟಪದ ಮಹತ್ವ ಸಾರಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವೀಕ್ಷಿಸಿದರು, ಪ್ರತಿನಿಧಿಗಳು ಇದ್ದರು.

ಬಳಿಕ ವಿಕ್ಕು ವಿನಾಯಕ್ ತಂಡದಿಂದ ಗಟ ವಾದನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಇದನ್ನೂ ಓದಿ: IPL: ಲಕ್ನೋ ತಂಡಕ್ಕೆ ನೂತನ ಕೋಚ್​ ನೇಮಕ

ಈ ವೇಳೆ ಭಾರತ ಜಿ-20 ಶೆರ್ಪಾ ಮುಖ್ಯಸ್ಥ ಅಮಿತಾಬ್ ಕಾಂತ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಭಾಗವಹಿಸಿದ್ದರು.

Exit mobile version