Site icon Vistara News

G 20 Summit: ಜಿ-20 3ನೇ ಶೆರ್ಪಾ ಸಭೆ, ವಿವಿಧ ದೇಶಗಳ 125 ಪ್ರತಿನಿಧಿಗಳು ಭಾಗಿ: ಅಮಿತಾಬ್ ಕಾಂತ್ ಮಾಹಿತಿ

Indian Sherpa Amitabh Kant pressmeet

ವಿಜಯನಗರ: ಹಂಪಿಯ ಜಿ-20 3ನೇ ಶೆರ್ಪಾ ಸಭೆಯಲ್ಲಿ (G 20 3rd Sherpa Meeting) ದೇಶ ವಿದೇಶಗಳ 125 ಪ್ರತಿನಿಧಿಗಳು (Delegates) ಭಾಗಿಯಾಗಿದ್ದಾರೆ. ಸಭೆಯಲ್ಲಿ ಸುಸ್ಥಿರ ಅಭಿವೃದ್ಧಿ, ಮಾನವ ಕಲ್ಯಾಣ, ಅಂತರಾಷ್ಟ್ರೀಯ ವ್ಯವಹಾರ, ಸಾರ್ವಜನಿಕ ಮೂಲಭೂತ ಸೌಕರ್ಯದ ಡಿಜಟಲೀಕರಣ ಸೇರಿದಂತೆ ಅಂತರಾಷ್ಟ್ರೀಯ ಶಾಂತಿ, ಭಯೋತ್ಪಾದನೆ ನಿಯಂತ್ರಣ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಲಾಗುವುದು ಎಂದು ಭಾರತೀಯ ಶೆರ್ಪಾ ಅಮಿತಾಬ್ ಕಾಂತ್ ಹೇಳಿದರು.

ಹಂಪಿಯ ಎವಾಲ್ವ್ ಬ್ಯಾಕ್ ಖಾಸಗಿ ರೆಸಾರ್ಟ್‌ನ ಲೋಟಸ್ ಮಹಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಇದನ್ನೂ ಓದಿ: Education Guide : ಬೆಸ್ಟ್‌ ಶಿಕ್ಷಣ ಸಂಸ್ಥೆ ಯಾವುದು? ಇಲ್ಲಿದೆ ಮಾಹಿತಿ

ಪ್ರಸ್ತುತ ಪ್ರಪಂಚದ 3/1 ಭಾಗದ ರಾಷ್ಟ್ರಗಳು ಹಣಕಾಸು ಮುಗ್ಗಟ್ಟು ಹಾಗೂ ಹಿಂಜರಿತವನ್ನು ಅನುಭವಿಸುತ್ತಿವೆ. ಹಸಿವು ಹಾಗೂ ಕುಪೋಷಣೆಯನ್ನು ಹೋಗಲಾಡಿಸಲು , ಸಾರ್ವತ್ರಿಕ ಸ್ವಾಸ್ಥ್ಯ ಯೋಜನೆ, ಕೋವಿಡ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ, ಗುಣಮಟ್ಟದ ಶಿಕ್ಷಣ ನೀಡುವ ಕುರಿತಾದ ಪ್ರಮುಖ ವಿಷಯಗಳು, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕ್ರಮಗಳ ಕುರಿತು ಶೆರ್ಪಾ ಸಭೆಗಳಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಜಾಗತಿಕ ಬೆಳವಣಿಗೆ, ಬೃಹತ್ ಆರ್ಥಿಕ ನೀತಿಗಳು, ಖಾಸಗಿ ಕಂಪನಿಗಳ ಭಾಗಿತ್ವ, ಮುಕ್ತ ಜಾಗತಿಕ ವಹಿವಾಟು, ಸುಸ್ಥಿರ ಅಭಿವೃದ್ಧಿ, ಮುಂದಿನ ಜನಾಂಗ ದೃಷ್ಟಿಯಿಂದ ಆಧುನಿಕ ನಗರಗಳ ನಿರ್ಮಾಣ, ಜಾಗತಿಕ ಆರ್ಥಿಕ ಸಹಕಾರ, ಜಾಗತಿಕ ವಹಿವಾಟು ಹಾಗೂ ಕೊಡುಕೊಳ್ಳುವಿಕೆ ಕುರಿತು ಅಂತರಾಷ್ಟ್ರೀಯ ಕಾನೂನು, ಭ್ರಷ್ಟಾಚಾರ ಹೋಗಲಾಡಿಸಲು ಕ್ರಮಗಳ ಕುರಿತು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಕ್ರಿಪ್ಟೋ ಕರೆನ್ಸಿ ಕುರಿತು ರೂಪುರೇಷೆ, ಟ್ಯಾಕ್ಸ್ ಸೇರಿದಂತೆ ಹಲವಾರು ವಿಷಯಗಳನ್ನು ಶೆರ್ಪಾ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ವಿಶ್ವ ಸಂಸ್ಥೆ ರೂಪಿಸಿರುವ ಸುಸ್ಥಿರ ಅಭಿವೃದ್ಧಿ ಕುರಿತಾದ ಯೋಜನೆಗಳನ್ನು 2030ರ ಒಳಗೆ ಜಾರಿ ಮಾಡಬೇಕಾಗಿದೆ. ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಈ ಸುಸ್ಥಿರ ಅಭಿವೃದ್ಧಿ ಯೋಜನೆಯ ಕೇವಲ ಶೇ.12 ರಷ್ಟು ಗುರಿಗಳನ್ನು ಮಾತ್ರ ಚಾಲನೆಯಲ್ಲಿವೆ. ಆದ್ದರಿಂದ ಈ ಬಾರಿಯ ಜಿ-20 ಶೃಂಗ ಸಭೆಯಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು.‌

ಇದನ್ನೂ ಓದಿ: Cheetah Dies: ಕುನೊದಲ್ಲಿ 8ನೇ ಚೀತಾ ಸಾವು; ಕೇಂದ್ರದ ಯೋಜನೆಗೆ ಹಿನ್ನಡೆ?

ಸುಸ್ಥಿರ ಅಭಿವೃದ್ಧಿಗಾಗಿ ಹಸಿರು ಒಪ್ಪಂದ, ಹವಾಮಾನ ಆರ್ಥಿಕತೆ, ನೀಲಿಸಾಗರ ಆರ್ಥಿಕತೆ, ಪರಿಸರ ಮೇಲೆ ಪ್ಲಾಸ್ಟಿಕ್ ನಿಂದಾಗೂ ಮಾಲಿನ್ಯ ನಿಯಂತ್ರಣ, ಹವಾಮಾನ ವೈಪರೀತ್ಯ, ನೈಸರ್ಗಿಕ ವಿಕೋಪಗಳನ್ನು ಎದಿರಿಸಲು ಯೋಜನಗೆಳನ್ನು ರೂಪಿಸಲಾಗುವುದು ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವ್ಯವಹಾರಗಳನ್ನು ಸರಳೀಕೃತಗೊಳಿಸಲು ಹಣಕಾಸು ಸಂಸ್ಥೆಗಳ ಸ್ಥಾಪನೆ, ಸದ್ಯ ಕಾರ್ಯ ನಿರ್ವಹಿಸುತ್ತಿರುವ ಹಣಕಾಸು ಸಂಸ್ಥೆಗಳು ಹಾಗೂ ಐಎಂಎಫ್ ಸುಧಾರಣೆ ಕುರಿತು ಮಾತುಕತೆ ನಡೆಸಲಾಗುವುದು.

ಪ್ರಪಂಚದ ಸುಮಾರು 3 ಬಿಲಿಯನ್ ಜನರು ಸರಿಯಾದ ಆರ್ಥಿಕ ಸರ್ಪೇಡಯಲ್ಲಿ ಸಕ್ರಿಯವಾಗಿ ಭಾಗಿದಾರರಾಗಿಲ್ಲ. ಇಂತಹರ ನೆರವಿಗಾಗಿ ತಂತ್ರಜ್ಞಾನದ ವಿನಿಮಯ ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಡಿಜಿಟಲಿಕರಣ ಮಾಡುವ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡಲಾಗುತ್ತದೆ ಎಂದು ತಿಳಿಸಿದರು.

ಲಿಂಗ ಸಮಾನತೆ, ಭಯೋತ್ಪಾದನೆಯ ವಿರುದ್ದ ಹೋರಾಟ, ಅಂತರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಶೆರ್ಪಾ ಮಹತ್ವ ನೀಡಲಿದೆ. ಜಿ-20 ಯಲ್ಲಿ ಒಟ್ಟು 54 ರಾಷ್ಟಗಳು ಭಾಗಿಯಾಗಿದ್ದು, ಆಫ್ರಿಕಾ ಯೂನಿಯನ್ ಸಹ ಭಾಗಿಧಾರರನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದಾಗಿ ಪ್ರಪಂಚದಲ್ಲಿನ ಶೇ.50ಕ್ಕಿಂತ ಹೆಚ್ಚು ರಾಷ್ಟ್ರಗಳು ಜಿ-20 ಭಾಗವಹಿಸದಂತಾಗುತ್ತದೆ. ಪ್ರಪಂಚದ ಬಹು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಜಿ-20 ಬೃಹತ್ ವೇದಿಕೆಯಾಗಲಿದೆ ಎಂದರು.

ಇದನ್ನೂ ಓದಿ: Chandrayaan 3: ವಿಜ್ಞಾನಿಗಳಿಗೆ ನನ್ನ ಸೆಲ್ಯೂಟ್‌ ಎಂದ ಮೋದಿ; ಇಸ್ರೊಗೆ ಅಭಿನಂದನೆಗಳ ಮಹಾಪೂರ

ಪತ್ರಿಕಾಗೋಷ್ಠಿಯಲ್ಲಿ ಶೆರ್ಪಾ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ಸಿನ್ಹಾ ಇದ್ದರು.

Exit mobile version