Site icon Vistara News

G 20 Summit: ಹಂಪಿಯಲ್ಲಿ ಜಿ-20 ಪ್ರತಿನಿಧಿಗಳಿಂದ ಯೋಗಾಭ್ಯಾಸ

Yoga practice by G-20 delegates at Hampi

ವಿಜಯನಗರ: ಹಂಪಿಯಲ್ಲಿ (Hampi) ಆಯೋಜಿಸಿರುವ ಜಿ-20 3ನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯ (G 20 Summit) ಕೊನೆಯ ದಿನವಾದ ಬುಧವಾರ ಜಿ-20 ಪ್ರತಿನಿಧಿಗಳು ಯೋಗ (Yoga) ಮಾಡುವ ಮೂಲಕ ಗಮನ ಸೆಳೆದರು.

ಕಳೆದ ಎರಡು ದಿನಗಳಿಂದ ಹಲವು ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಕಸೂತಿ ಕಲೆ ಪ್ರದರ್ಶನ ಸೇರಿ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದರು, ಅದರ ಭಾಗವಾಗಿ ಬುಧವಾರ ಬೆಳಗ್ಗೆ ಶ್ರೀಪಟ್ಟಾಭಿರಾಮ ದೇವಸ್ಥಾನದ ಪ್ರಾಂಗಣದಲ್ಲಿ ನೂರಾರು ವಿದೇಶಿ ಪ್ರತಿನಿಧಿಗಳು ಒಟ್ಟಾಗಿ ಯೋಗಾಭ್ಯಾಸ ಮಾಡಿದರು.

ಇದನ್ನೂ ಓದಿ: Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!

ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಆಯುಷ್ ಇಲಾಖೆಯ ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು.

ಕಾರ್ಯಕ್ರಮ ಆರಂಭದಲ್ಲಿ ಓಂಕಾರ, ಗಾಯತ್ರಿ ಮಂತ್ರ ಪಠಣದೊಂದಿಗೆ ಶುರು ಆಯಿತು. ಯೋಗದಲ್ಲಿ ಸರಳ ವ್ಯಾಯಾಮದೊಂದಿಗೆ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ವಜ್ರಾಸನ ಹಾಗೂ ಪದ್ಮಾಸನದಲ್ಲಿ ಯೋಗ ಮಾಡಿದರು.

ಇದನ್ನೂ ಓದಿ: Online Fraud: ಆನ್‌ಲೈನ್‌ನಲ್ಲಿ ಸ’ಮೋಸ’ ಆರ್ಡರ್‌ ಮಾಡಿ 1.4 ಲಕ್ಷ ರೂ. ಕಳೆದುಕೊಂಡ ಡಾಕ್ಟರ್

ಬಳಿಕ ಸುಖಾಸನದಲ್ಲಿ ಸುಮಾರು 10 ನಿಮಿಷ ಧ್ಯಾನಕ್ಕೆ ಮೊರೆ ಹೋದರು, ಹಂಪಿಯ ಐತಿಹಾಸಿಕ ಪಟ್ಟಾಭಿರಾಮ ಸನ್ನಿಧಾನದ ಆವರಣದ ಪ್ರಶಾಂತವಾದ ವಾತಾವರಣ ಹಾಗೂ ಗುಬ್ಬಚ್ಚಿಗಳ ಚಿಲಿಪಿಲಿಯ ನಾದ ವಿದೇಶಿ ಗಣ್ಯರ ಧ್ಯಾನವನ್ನು ಸಾಕಾರಗೊಳಸಿತು. ಯೋಗಾಭ್ಯಾಸ ಅಂತ್ಯದ ವೇಳೆ ಓಂಕಾರ ಹಾಗೂ ಶಾಂತಿ ಮಂತ್ರ ಪಠಣ ಮಾಡುವ ಮೂಲಕ ಅಂತ್ಯಗೊಳಿಸಲಾಯಿತು.

Exit mobile version