ಗದಗ: ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ದರ್ಬಾರ್ಗೆ ಅಧಿಕಾರಿಗಳು ಕಿಡಿಕಾರಿದ್ದಾರೆ. ಹುಯಿಲಗೋಳ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರತ ಪಿಡಿಓ ಅಧಿಕಾರಿಗೆ ಸದಸ್ಯೆಯ ಪತಿ ಕಪಾಳಮೋಕ್ಷ ಮಾಡಿರುವ (Gadag News) ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯೆ ನೀಲವ್ವ ಕಡಿ ಅವರ ಪತಿ ರಮೇಶ್ ಕಡಿ ಎಂಬಾತ ಹಲ್ಲೆ ಮಾಡಿದ್ದಾನೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಪಿಡಿಓಗೆ ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಒಡೆದಿದ್ದಾರೆ. ಸದಸ್ಯೆ ಬದಲು ಪತಿರಾಯ ಅಧಿಕಾರ ದುರ್ಬಳಕೆ ಆರೋಪ ಕೇಳಿ ಬಂದಿದೆ. ಸುಖಾಸುಮ್ಮನೆ ಕಚೇರಿಗೆ ಬರುವ ರಮೇಶ್ ಕಡಿ ಇಲ್ಲಸಲ್ಲದ ಮಾಹಿತಿ ಕೇಳುತ್ತಾ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Traffic Fine Rebate: ಮತ್ತೊಮ್ಮೆ 50% ಟ್ರಾಫಿಕ್ ಫೈನ್ ಡಿಸ್ಕೌಂಟ್ ಘೋಷಿಸಿದ ಸರ್ಕಾರ; ಮಾರ್ಚ್ 18ರವರೆಗೆ ಕಾಲಾವಕಾಶ
ಯಾವ ಅಧಿಕಾರ ಇಲ್ಲದಿದ್ದರೂ ಪತ್ನಿಯ ಪರವಾಗಿ ಅಧಿಕಾರ ಚಲಾವಣೆ ಮಾಡುತ್ತಿದ್ದಾರೆ. ಇನ್ನು ಈ ಸಂಬಂಧ ಪಿಡಿಓ ಮತ್ತು ಸಿಬ್ಬಂದಿ ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಮಧ್ಯಪ್ರವೇಶಿಸಿದ ಗ್ರಾಮಸ್ಥರು, ಸದಸ್ಯೆಯ ಪತಿ ಜತೆಗೆ ಸಂಧಾನ ಮಾಡಿಸಿದ್ದಾರೆ. ಮಾತ್ರವಲ್ಲದೇ ಠಾಣೆಗೆ ಕೊಟ್ಟಿದ್ದ ದೂರು ಹಿಂಪಡೆದಿದ್ದಾರೆ. ದರ್ಪ ತೋರಿ ಸರಕಾರಿ ಅಧಿಕಾರಿ ಮೇಲೆ ಕೈ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳದೆ ಸಂಧಾನದಲ್ಲಿ ಮುಗಿದು ಹೋಗಿದೆ.
ಸಿನಿಮಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ