Site icon Vistara News

Gadag News: ಮುಂಡರಗಿಯಲ್ಲಿ ಬಾವಿಯಲ್ಲಿ ಬಿದ್ದಿದ್ದ ನಾಗರಹಾವಿನ ರಕ್ಷಣೆ

Rescue of a cobra that fell in a well in Mundaragi

ಗದಗ: ತೋಟದ ಬಾವಿಯೊಂದರಲ್ಲಿ ಬಿದ್ದಿದ್ದ ನಾಗರಹಾವನ್ನು (Cobra) ರಕ್ಷಣೆ ಮಾಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ (Mundaragi) ಪಟ್ಟಣದಲ್ಲಿ ಜರುಗಿದೆ.

ಮುಂಡರಗಿ ಪಟ್ಟಣದ ರಾಘವೇಂದ್ರ ಕುರಿ ಎಂಬುವವರ ತೋಟದ ಬಾವಿಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಬಹಳಷ್ಟು‌ ಆಳವಿದ್ದ ಬಾವಿಯಲ್ಲಿ ಬಿದ್ದು, ನೀರಿನಿಂದ ಮೇಲೆ ಬರಲಾರದೇ ಪರದಾಡುತ್ತಿದ್ದ ನಾಗರಹಾವನ್ನು ಕಂಡ ತೋಟದ ಮಾಲೀಕ ಮಾನವೀಯತೆ ಮೆರೆದಿದ್ದು, ಕೂಡಲೇ ಉರಗ ರಕ್ಷಕನನ್ನು ಸ್ಥಳಕ್ಕೆ ಕರೆಯಿಸಿದ್ದರು.

ಇದನ್ನೂ ಓದಿ: COVID Subvariant JN1: ಇನ್ನು ಮಾಸ್ಕ್‌ ಧರಿಸಿ ಬಸ್‌ನಲ್ಲಿ ಪ್ರಯಾಣಿಸಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಜಲಾಲ್ ಕೊಪ್ಪಳ ಎಂಬುವವರು ಕಾರ್ಯಾಚರಣೆ ನಡೆಸಿ, ಹಾವನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಬಳಿಕ ನಾಗರಹಾವನ್ನು ಸುರಕ್ಷಿತ ಪ್ರದೇಶಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Exit mobile version