ಗದಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಅಂಗವಾಗಿ ಜಿಲ್ಲೆಯ ಸೊರಟೂರು ಗ್ರಾಮದಲ್ಲಿ ಶಾಲೆಯ ಮಕ್ಕಳಿಂದ “ಸ್ವಾತಂತ್ರ್ಯದ ನಡಿಗೆ, ಅಮೃತ ಮಹೋತ್ಸವದೆಡೆಗೆ” ನಡಿಗೆ ಕಾರ್ಯಕ್ರಮ ನಡೆಯಿತು.
ಸೊರಟೂರಿನ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಂಚರಿಸಿದ ಶಾಲಾ ಮಕ್ಕಳು, ಭಾರತದ ಮತ್ತು ಸ್ವಾತಂತ್ರ್ಯೋತ್ಸವದ ಪರವಾಗಿ ಜಯಘೋಷ ಹಾಕಿದರು. ಸ್ವಾತಂತ್ರ್ಯದ ಕುರಿತು ಸ್ವಾಭಿಮಾನ ಮೂಡಿಸಿದರು. ಸುರಿಯುವ ಮಳೆಯ ನಡುವೆಯೂ ಈ ಕಾರ್ಯಕ್ರಮ ನಡೆದಿದ್ದು, ಮಕ್ಕಳ ದೇಶಪ್ರೇಮವನ್ನು ಪ್ರತಿಬಿಂಬಿಸುತ್ತಿತ್ತು.
ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ʼಹರ್ ಘರ್ ತಿರಂಗಾʼ ಅಭಿಯಾನದಲ್ಲಿ ಗ್ರಾಮಸ್ಥರು ದೇಶ ಪೇಮ ಮತ್ತು ಅಭಿಮಾನದಿಂದ ಭಾಗವಹಿಸಲಿದ್ದಾರೆ ಎಂದು ಪಿಡಿಒ ಮಾಹಾಂತೇಶ ಮೇವುಂಡಿ ಹರ್ಷ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕ-ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.