ಗದಗ/ಕಾರವಾರ: ಪ್ರತ್ಯೇಕ ಕಡೆಗಳಲ್ಲಿ ಅವಘಡ ಸಂಭವಿಸಿದೆ, ಗದಗದಲ್ಲಿ ಯುವಕರ್ನೊವ ನೀರುಪಾಲಾಗಿದ್ದರೆ, ಗೋಕರ್ಣ ಬೀಚ್‌ನಲ್ಲಿ ಮುಳುಗುತ್ತಿದ್ದ ಯುವತಿಯರನ್ನು (Drowned in Water) ರಕ್ಷಣೆ ಮಾಡಲಾಗಿದೆ.
ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಬೇಸಿಗೆ ಬಿಸಿಗೆ ಈಜಾಡಲು ತೆರಳಿದ್ದ ಯುವಕ ಕೊಳದಲ್ಲಿ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಹೊಂಬಳ ಗ್ರಾಮದ ಗೊಲ್ಲಾವಿ ಕೊಳದಲ್ಲಿ ಅವಘಡ ಸಂಭವಿಸಿದೆ. ಗೂಳಪ್ಪ ಹಳ್ಳಿ (35) ಎಂಬಾತ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಗೊಲ್ಲಾವಿ ಕೊಳದ ದಡದಲ್ಲಿ ಯುವಕನ ಬಟ್ಟೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಗ್ರಾ.ಪಂಯಿಂದ ಶೋಧ ಮುಂದುವರಿದಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Kidnap Case : ಕಾರಲ್ಲಿ ಬಂದು ಕಾಲೇಜು ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿದ ಯುವಕರು!
ಸಮುದ್ರದ ಸುಳಿಗೆ ಸಿಲುಕಿಕೊಂಡ ಯುವತಿಯರು
ಕಾರವಾರ: ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ ಘಟನೆ ನಡೆದಿದೆ. ಸ್ಮಿತಾ(23), ನಿಹಾರಿಕಾ(22), ಪವಿತ್ರಾ(22) ರಕ್ಷಣೆಗೊಳಗಾದ ಪ್ರವಾಸಿಗರು.
ಬೆಂಗಳೂರಿನ ಜಯನಗರ ನಿವಾಸಿಗಳಾದ ಈ ಮೂವರು ಸಮುದ್ರದಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಇದನ್ನೂ ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ನವೀನ್ ಅಂಬಿಗ, ಮಂಜುನಾಥ ಹರಿಕಂತ್ರ ಎಂಬುವವರು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ