Site icon Vistara News

Yoga day 2023 : ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ವಿಸ್ತಾರ ನ್ಯೂಸ್‌ ಸಹಭಾಗಿತ್ವದಲ್ಲಿ ಜಾಗೃತಿ ಜಾಥಾ

Yoga day awareness

#image_title

ಗದಗ: ಜೂನ್‌ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (Yoga day 2023) ಹಿನ್ನೆಲೆಯಲ್ಲಿ ಮಂಗಳವಾರ (ಜೂನ್‌ 20) ಗದಗ ಜಿಲ್ಲೆ (Gadaga News) ಮುಂಡರಗಿ ಪಟ್ಟಣದಲ್ಲಿ ಯೋಗದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಹಲವಾರು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಾಥಾಕ್ಕೆ ವಿಸ್ತಾರ ನ್ಯೂಸ್ ಕೂಡ ಸಹಭಾಗಿಯಾಗಿತ್ತು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಿಂದ ಆರಂಭವಾದ ಜಾಥಾಗೆ (Yoga jatha) ಹಿರಿಯ ಶ್ರೀಗಳಾದ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಅನ್ನದಾನೀಶ್ವರ ವಿದ್ಯಾಸಮಿತಿ, ಅನ್ಮೋಲ್ ಯೋಗ ಸಮಿತಿ, ಪತಂಜಲಿ ಯೋಗ ಸಮಿತಿ, ಮದರ್ ಥೆರೆಸಾ ಯೋಗ ಸಮಿತಿ, ಆಯುಷ್ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಮತ್ತು ಕನ್ನಡ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಯೋಗ‌ ಸಂದೇಶದ ಕುರಿತು ಜಾಥಾ ನೆರವೇರಿತು.‌

ಮಠದಿಂದ ಆರಂಭವಾದ ಜಾಗೃತಿ ಜಾಥಾ ಗಾಂಧಿ ವೃತ್ತ, ಮೇನ್ ಬಜಾರ, ಬೃಂದಾವನ ಸರ್ಕಲ್, ಕೊಪ್ಪಳ ವೃತ್ತ ಸೇರಿದಂತೆ ಅನೇಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಈ ವೇಳೆ ಮಾತನಾಡಿದ ಶ್ರೀಗಳು, ಯೋಗದಿಂದ ರೋಗಮುಕ್ತಿಯಾಗಿ ದೇಹ ಮತ್ತು ಮನಸ್ಸು ಒಂದಾಗುತ್ತದೆ ಎಂದರು. ʻʻನಮ್ಮ ದೇಶದ ಯೋಗದ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಕೀರ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆʼʼ ಎಂದು ಹೇಳಿದರು.

ಜಾಥಾದಲ್ಲಿ ಯೋಗಸಾಧಕರಾದ ಮಂಜುನಾಥ ಅಳವಂಡಿ, ಮಂಗಳಾ ಸಜ್ಜನ, ಮಂಜುನಾಥ ಇಟಗಿ, ನಾಗೇಶ ಹುಬ್ಬಳ್ಳಿ, ಮಂಜುನಾಥ ಮುಧೋಳ, ಮಂಜುಳಾ ಇಟಗಿ, ಪುರಸಭೆ ಸದಸ್ಯೆ ಜ್ಯೋತಿ ಹಾನಗಲ್, ಅಶೋಕ ಸವಣೂರ, ನಾರಾಯಣಪ್ಪ ಗುಬ್ಬಿ, ಬಿ.ಆರ್ ಕುಲಕರ್ಣಿ, ವಿಸ್ತಾರ ನ್ಯೂಸ್‌ನ ತಾಲೂಕು ವರದಿಗಾರ ರಂಗನಾಥ ಕಂದಗಲ್ಲ, ಸೇರಿದಂತೆ ಎನ್ ಸಿ ಸಿ ವಿದ್ಯಾರ್ಥಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ : Yoga Day 2023: ವಿಶ್ವವನ್ನೇ ಬೆರಗುಗೊಳಿಸುತ್ತಿರುವ ಯೋಗದ ಇತಿಹಾಸ, ಥೀಮ್, ಆಚರಣೆಯ ಹಿನ್ನೆಲೆ ಏನು?

Exit mobile version