ಗದಗ: ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ 1000 ಕ್ಕೂ ಹೆಚ್ಚು ಮನೆಗಳು ಧರೆಗೂರುಳಿವೆ. ಅನೇಕ ಸಂಸ್ಥೆಗಳು ಪರಿಹಾರ ರೂಪದಲ್ಲಿ ಮನೆ ಪುನರ್ಮಿಸಲು ಮುಂದಾಗುತ್ತಿವೆ. ಅದರಲ್ಲಿ ಯಂಗ್ ಇಂಡಿಯಾ ಸಂಸ್ಥೆಯೂ ಒಂದಾಗಿದೆ.
ಆಟೊ ಚಾಲಕರ ಕಲ್ಯಾಣಕ್ಕಾಗಿ ಸ್ಥಾಪಿತವಾದ ಯಂಗ್ ಇಂಡಿಯಾ ಸಂಸ್ಥೆ ಮಳೆಯಿಂದ ಹಾನಿಗೊಳಗಾದ ಆಟೊ ಚಾಲಕರೊಬ್ಬ ಮನೆ ರಿಪೇರಿಗೆ ನೆರವು ನೀಡಲು ಮುಂದಾಗಿದೆ. ಕುಮಾರ್ ಪವಾರ್ ಎಂಬ ಆಟೋ ಚಾಲಕನ ಮನೆ ಬಿದ್ದಿತ್ತು. ಈ ಆಟೋ ಚಾಲಕನ ನೆರವಿಗೆ ಧಾವಿಸಿದ ಯಂಗ್ ಇಂಡಿಯಾ ಸಂಸ್ಥೆ ಪರಿವಾರ ಪ್ರಾಥಮಿಕ ಹಂತದಲ್ಲಿ 10 ಸಾವಿರ ರೂ. ಮತ್ತು ಸಾಮಗ್ರಿಗಳನ್ನು ವಿತರಿಸಿದೆ.
ಆರ್ಥಿಕ ಸಹಾಯ ಪಡೆದ ಕುಮಾರ್ ಅವರು ಮನೆ ನಿರ್ಮಿಸಿಕೊಂಡಿದ್ದಾರೆ. ಮತ್ತು ಸಂಸ್ಥೆಗೂ ಧನ್ಯವಾದ ತಿಳಿಸಿದ್ದಾರೆ.
ʻʻನೂರಾರು ಆಟೋ ಚಾಲಕರ ಪರಿಸ್ಥಿತಿಯೂ ಇದೇ ಆಗಿದೆ. ಯುವಕರು, ದಾನಿಗಳು ಇತರರಿಗೂ ಸಹಾಯ ಆಡಲು ಯಂಗ್ ಇಂಡಿಯಾ ಸಂಸ್ಥೆ ಜತೆಗೆ ಕೈಜೋಡಿಸಬೇಕುʼʼ ಎಂದು ಯಂಗ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರು ಹೇಳಿದ್ದಾರೆ.
ಇದನ್ನೂ ಓದಿ | Rain News | ಗದಗದಲ್ಲಿ ಭಾರಿ ಮಳೆಗೆ ಕುಸಿದ ಮನೆ: ಅವಶೇಷಗಳಡಿ ಸಿಲುಕಿ ಮಹಿಳೆ ಸಾವು