Site icon Vistara News

ಗಾಲಿ ಜನಾರ್ದನ ರೆಡ್ಡಿ ಹೊಸ ಮನೆ ಪ್ರವೇಶ ಸಂಭ್ರಮ ಇಂದು; ಗಂಗಾವತಿಯಿಂದ ಸ್ಪರ್ಧಿಸಲು ಗೃಹಪ್ರವೇಶ ಮುಹೂರ್ತ?

Janardhan Reddy | ಕಲ್ಯಾಣ ರಾಜ್ಯ ಪ್ರಗತಿ‌ ಪಕ್ಷ ಮೂಲಕ ಜನಾರ್ದನ ರೆಡ್ಡಿ ರಾಜಕೀಯ ಮರು ಪ್ರವೇಶ?

ಕೊಪ್ಪಳ: ಹಿಂದೊಂದು ಕಾಲದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದು, ಗಣಿ ಹಗರಣದ ಬಳಿಕ ತೆರೆಮರೆಗೆ ಸರಿದಿದ್ದ ಗಾಲಿ ಜನಾರ್ಧನ ರೆಡ್ಡಿ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷವನ್ನು ಹುಟ್ಟುಹಾಕಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಅವರ ಮನೆಯಲ್ಲೀಗ ಮತ್ತೊಂದು ಸಂಭ್ರಮ ಮನೆ ಮಾಡಿದೆ.

ಗಾಲಿ ಜನಾರ್ದನ ರೆಡ್ಡಿ ಅವರ ಹೊಸ ಮನೆಯ ಗೃಹ ಪ್ರವೇಶ ಇಂದು ಭರ್ಜರಿಯಾಗಿಯೇ ನಡೆಯುತ್ತಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ರಸ್ತೆಯಲ್ಲಿ ಜನಾರ್ದರನ ರೆಡ್ಡಿ ಮನೆ ಖರೀದಿ ಮಾಡಿದ್ದು, ಅದರ ಗೃಹಪ್ರವೇಶವನ್ನು ಇಂದು ಆಚರಿಸಲಾಗುತ್ತದೆ. ಜನಾರ್ದನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಅವರಿಂದು ಗೃಹಪ್ರವೇಶ ಪೂಜೆ ನೆರವೇರಿಸಲಿದ್ದಾರೆ. ಇನ್ನು ನೂತನ ಮನೆಯ ಪ್ರವೇಶ ಸಮಾರಂಭಕ್ಕೆ ಗಾಲಿ ಜನಾರ್ದನ ರೆಡ್ಡಿ ಆಪ್ತರಿಗಷ್ಟೇ ಆಹ್ವಾನ ಕೊಟ್ಟಿದ್ದಾರೆ. ಮನೆಯನ್ನು ಭರ್ಜರಿಯಾಗಿ ಅಲಂಕಾರ ಮಾಡಲಾಗಿದೆ. ಡಿ.18ರಿಂದ ಅವರು ಗಂಗಾವತಿಯ ಈ ಮನೆಗೆ ಬಂದು ನೆಲೆಸಲಿದ್ದಾರೆ ಎನ್ನಲಾಗಿದೆ.

ಸಕ್ರಿಯ ರಾಜಕಾರಣಕ್ಕೆ ಮುಹೂರ್ತ
ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ, ಸಕ್ರಿಯ ರಾಜಕಾರಣಕ್ಕೆ ಇಳಿಯುವ ಸಿದ್ಧತೆಯಲ್ಲಿದ್ದಾರೆ. ಇದೀಗ ಹೊಸ ಮನೆ ಪ್ರವೇಶ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅವರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗುತ್ತಾರೆ ಎಂದು ಹೇಳಲಾಗಿದೆ. ಇನ್ನು ಜನಾರ್ದನ ರೆಡ್ಡಿ ಗಂಗಾವತಿಯಿಂದ ಮತ್ತು ಅವರ ಪತ್ನಿ ಅರುಣಾ ಅರುಣಾಲಕ್ಷ್ಮೀ ಗದಗದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 30 ಕ್ಷೇತ್ರದಿಂದ ಅವರ ಪಕ್ಷ ಸ್ಪರ್ಧಿಸಲಿದೆ. ಬೇರೆ ಬೇರೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ರೆಡ್ಡಿ ಅವರನ್ನು ಸಂಪರ್ಕಿಸುತ್ತಿದ್ದಾರೆ. ಅವರ ಸಕ್ರಿಯ ರಾಜಕಾರಣಕ್ಕೆ ಇಂದಿನ ಗೃಹಪ್ರವೇಶ ಮುಹೂರ್ತ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ:Janardhan Reddy | ಕಲ್ಯಾಣ ರಾಜ್ಯ ಪ್ರಗತಿ‌ ಪಕ್ಷ ಮೂಲಕ ಜನಾರ್ದನ ರೆಡ್ಡಿ ರಾಜಕೀಯ ಮರು ಪ್ರವೇಶ?

Exit mobile version