Site icon Vistara News

Gandhada Gudi | ಚಿತ್ರಮಂದಿರಗಳಲ್ಲಿ ನೂಕು ನುಗ್ಗಲು: ಅಪ್ಪು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದ ಫ್ಯಾನ್ಸ್‌!

Gandhada Gudi

ಬೆಂಗಳೂರು: ರಾಜ್ಯಾದ್ಯಂತ ʻಗಂಧದ ಗುಡಿ’ ಸಿನಿಮಾ (Gandhada Gudi) ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬೆಳಗಾವಿಯ ರೂಪ-ನರ್ತಕಿ ಚಿತ್ರಮಂದಿರದಲ್ಲಿ ಅಪ್ಪು ಕಟೌಟ್‌ಗಳಿಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದ್ದಾರೆ. ರಾಯಚೂರಿನಲ್ಲಿ ಅಪ್ಪು ಧ್ವಜ ಹಿಡಿದು ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. ಹಾವೇರಿಯಲ್ಲಿ ಅಪ್ಪು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

ಅಪ್ಪು ಧ್ವಜ ಹಿಡಿದು ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕಿದ ಅಪ್ಪು ಫ್ಯಾನ್ಸ್‌
ರಾಯಚೂರಿನಲ್ಲಿ ಪದ್ಮನಾಭ ಥಿಯೇಟರ್ ಮುಂಭಾಗ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆ ಆಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ಪು ಧ್ವಜ ಹಿಡಿದು ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರ ವೀಕ್ಷಣೆ ಮಾಡುವರಿಗೆ ಫ್ಯಾನ್ಸ್‌ ಕಡೆಯಿಂದ ಸಸಿ ವಿತರಣೆ ಮಾಡಲಾಗಿದೆ. ಟಿಕೆಟ್ ಸೋಲ್ಡ್ ಔಟ್‌ ಆಗಿದ್ದು, ಚಿತ್ರಮಂದಿರದಲ್ಲಿ ತಿಂಡಿಯ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ | Gandhada Gudi | ಪುನೀತ್‌ ಪ್ರಯತ್ನ ಹೆಮ್ಮೆ ತರುವಂತದ್ದು: ಇನ್ಫಿ ಸುಧಾಮೂರ್ತಿ

ಅಪ್ಪು ಟ್ಯಾಟೂ ಹಾಕಿಸಿಕೊಂಡು ಅಭಿಮಾನ
ಹಾವೇರಿಯಲ್ಲಿ ʻಗಂಧದ ಗುಡಿ ಸಿನಿಮಾʼ ನೋಡಲು ಜನ ಮುಗಿಬಿದ್ದಿದ್ದಾರೆ. ನಗರದ ಸರಸ್ವತಿ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಎದೆಯ ಮೇಲೆ ಅಪ್ಪು ಟ್ಯಾಟೂ ಹಾಗೂ ಗಂಧದ ಗುಡಿ ಎಂದು ಹೇರ್ ಕಟ್ಟಿಂಗ್‌ ಮಾಡಿಸಿಕೊಂಡು ಅಪ್ಪು ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ .ಅಪ್ಪು ಭಾವಚಿತ್ರವಿರುವ ಟೀ ಶರ್ಟ್‌ ಧರಿಸಿ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಬಂದಿದ್ದಾರೆ.

ಇದನ್ನೂ ಓದಿ | Gandhada Gudi | ಮಂಡ್ಯದ ನಿಮಿಷಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್‌ ರಾಜಕುಮಾರ್‌

ಟಿಕೆಟ್‌ಗಾಗಿ ನೂಕು ನುಗ್ಗಲು
ಯಾದಗಿರಿಯ ಶಹಾಪುರ ತಾಲೂಕಿನ ಭವಾನಿ ಚಿತ್ರಮಂದಿರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ ಕಟೌಟ್‌ಗಳು ರಾರಾಜಿಸುತ್ತಿವೆ. ಚಿತ್ರಮಂದಿರ‌ ಬಳಿ ಪಟಾಕಿ‌ ಸಿಡಿಸಿ ಪುನೀತ್‌ ಫ್ಯಾನ್ಸ್‌ ಸಂಭ್ರಮಿಸುತ್ತಿದ್ದಾರೆ. ಟಿಕೆಟ್‌ಗಾಗಿ ಚಿತ್ರಮಂದಿರದ ಬಳಿ ಭಾರಿ ನೂಕು ನುಗ್ಗಲು ಉಂಟಾಗಿದೆ.

ಕೇಕ್‌ ಕತ್ತರಿಸಿ ಸಂಭ್ರಮಾಚರಣೆ
ಚಿಕ್ಕೋಡಿಯಲ್ಲಿ ಗೋಕಾಕ ನಗರದ ಆನಂದ ಥೀಯೆಟರ್ ಮಾಲೀಕ ಶಂಕರರಾವ್ ಜಾಧವ್ ಕೇಕ್‌ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು. ಕನ್ನಡದ ಬಾವುಟ ಹಿಡಿದು ಪಟಾಕಿ ಹೊಡೆದು ಥಿಯೇಟರ್ ಮುಂದೆ ಅಪ್ಪು ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Gandhada Gudi | ಗಂಧದ ಗುಡಿಗೆ ಅದ್ಧೂರಿ ಸ್ವಾಗತ; ಸಾರೋಟಿನಲ್ಲಿ ಮೆರವಣಿಗೆ ಮಾಡಿದ ಅಭಿಮಾನಿಗಳು

Exit mobile version