ಕಾರವಾರ: ಉತ್ತರ ಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ರಮೇಶ ಮಾನಕರ್ ನೇಮಕಗೊಂಡಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಸ್ಥಳ ಕಾಯ್ದಿರಿಸಿ ವರ್ಗಾವಣೆ ಮಾಡಲಾಗಿದೆ.
2012ರ ಬ್ಯಾಚ್ನ ಕರ್ನಾಟಕ ಕೇಡರ್ ಅಧಿಕಾರಿಯಾದ ಗಂಗೂಬಾಯಿ ರಮೇಶ ಮಾನಕರ್ ಅವರು, ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿದ್ದರು. ಇನ್ನು ಈ ಹಿಂದಿನ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಅವರು 2022ರ ಅಕ್ಟೋಬರ್ನಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳ ಕಾಯ್ದಿರಿಸಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಡಾ.ಎಂ.ವಿ. ವೆಂಕಟೇಶ್ ದಾವಣಗೆರೆ ಡಿಸಿ
ದಾವಣಗೆರೆ: ದಾವಣಗೆರೆ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ವಿ. ವೆಂಕಟೇಶ್ ನೇಮಕಗೊಂಡಿದ್ದಾರೆ. ಈ ಹಿಂದಿನ ಶಿವಾನಂದ ಕಪಾಶಿ ಸ್ಥಾನಕ್ಕೆ ಡಾ.ಎಂ.ವಿ.ವೆಂಕಟೇಶ್ ನೇಮಕವಾಗಿದ್ದಾರೆ.
ಇದನ್ನೂ ಓದಿ | Karnataka Politics : ʼವರ್ಗಾವಣೆ ದಂಧೆʼ ಪತ್ರ ತನ್ನದಲ್ಲವೆಂದ ಬಿ.ಆರ್. ಪಾಟೀಲ್; ಬಿಜೆಪಿ ಫೇಕ್ ಫ್ಯಾಕ್ಟರಿ ಎಂದ ಕಾಂಗ್ರೆಸ್!