ಉಡುಪಿ: ಶಾಲೆಗೆ ಹೋಗುವ ಧಾವಂತದಲ್ಲಿ ಕವರ್ ಸಹಿತ ಚಾಕೊಲೆಟ್ ಸೇವಿಸಿದ ಆರು ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಬೈಂದೂರು ತಾಲೂಕು ಬವಳಾಡಿ ಮೂಲದ ಸಮನ್ವಿ (6) ಮೃತ ಬಾಲಕಿ.
ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಸಮನ್ವಿ, ಎಂದಿನಂತೆ ಮುಂಜಾನೆ ಶಾಲೆಯ ಬಸ್‌ಗೆ ಕಾಯುತ್ತಿದ್ದಳು.
ಈ ವೇಳೆ ಹಠ ಮಾಡುತ್ತಿದ್ದ ಮಗಳನ್ನು ಸಮಾಧಾನ ಪಡಿಸಲು ಸಮನ್ವಿ ತಾಯಿ ಚಾಕೊಲೆಟ್ ಕೊಟ್ಟಿದ್ದಾರೆ. ಈದೇ ಸಮಯಕ್ಕೆ ಶಾಲಾ ವಾಹನ ಬಂದಿದೆ. ಬಾಲಕಿ ಅವಸರದಲ್ಲಿ ಕವರ್ ಸಹಿತ ಚಾಕೊಲೆಟ್ ಸೇವಿಸಿದ್ದಾಳೆ.
ಚಾಕೊಲೆಟ್ ಗಂಟಲಿನಲ್ಲಿ ಸಿಕ್ಕಿಕೊಂಡ ಪರಿಣಾಮ ಉಸಿರುಗಟ್ಟಿ ಅಲ್ಲಿಯೇ ಕುಸಿದುಬಿದ್ದಿದ್ದಾಳೆ. ಕೂಡಲೆ ತಾಯಿ, ವಾಹನ ಚಾಲಕ, ಸ್ಥಳೀಯರು ಆಸ್ಪತ್ರೆಗೆ ಕರೊದೊಯ್ದಿದ್ದಾರೆ. ಆದರೆ ಈ ವೇಳೆಗೆ ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ಮೃತದೇಹವನ್ನು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಬೊಲೆರೋ ಪಿಕಪ್: 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವು