Site icon Vistara News

Gokarna Beach | ಗೋಕರ್ಣಕ್ಕೆ ಟ್ರಕ್ಕಿಂಗ್‌ಗೆ ಹೋಗಿದ್ದ ಬೆಂಗಳೂರಿನ ಪ್ರವಾಸಿಗ 50 ಅಡಿ ಆಳದಿಂದ ಬಿದ್ದು ಗಾಯ

gokarna beach

ಕಾರವಾರ: ಕುಮಟಾದ ಗೋಕರ್ಣ ಸಮುದ್ರ (Gokarna Beach) ಬಳಿ ಟ್ರಕ್ಕಿಂಗ್‌ಗೆ ಎಂದು ತೆರಳಿದ್ದ ಯುವ ಪ್ರವಾಸಿಗನೊಬ್ಬ ಐವತ್ತು ಅಡಿಗೂ ಅಧಿಕ ಆಳದಲ್ಲಿ ಬಿದ್ದಿದ್ದು, ಗಾಯಗೊಂಡ ಯುವಕನನ್ನು ರಕ್ಷಣೆ ಮಾಡಲಾಗಿದೆ.

ಸೌರವ್‌ ಯಾದವ್ ರಕ್ಷಣೆಗೊಳಪಟ್ಟ ಯುವಕ. ಇವರು ಟ್ರಕ್ಕಿಂಗ್ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಸೌರವ್, ಗೋಕರ್ಣದ ಪ್ಯಾರಡೈಸ್ ಬೀಚ್‌ಗೆ ಟ್ರಕ್ಕಿಂಗ್‌ಗೆ ಹೊರಟಿದ್ದರು. ಈ ವೇಳೆ ಆಯತಪ್ಪಿ ಕಂದಕಕ್ಕೆ ಬಿದ್ದು ಕಾಲಿಗೆ ಗಂಭೀರ ಗಾಯವಾಗಿತ್ತು.

ಸೌರವ್‌ ಬಿದ್ದಿದ್ದನ್ನು ಗಮನಿಸಿದ ಪ್ರವಾಸಿ ಬೋಟ್ ಚಾಲಕರೊಬ್ಬರು ಕೂಡಲೇ ಈ ಕುರಿತು ರಕ್ಷಣೆಗಾಗಿ ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದಾರೆ. ಕರಾವಳಿ ಕಾವಲುಪಡೆ, ಲೈಫ್‌ಗಾರ್ಡ್ ಸಿಬ್ಬಂದಿಯು ಸ್ಥಳಕ್ಕೆ ತೆರಳಿ, ಶೋಧ ನಡೆಸಿ ಗಾಯಗೊಂಡು ಬಿದ್ದಿದ್ದ ಸೌರವ್‌ನನ್ನು ರಕ್ಷಿಸಿದ್ದಾರೆ.

ಸೌರವ್‌ಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | LPG Price Hike | ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆ ಹೆಚ್ಚಳ; ಹೊಸ ವರ್ಷದ ಮೊದಲ ದಿನವೇ ದರ ಏರಿಕೆ ಹೊರೆ

Exit mobile version