Site icon Vistara News

ರಾಜ್ಯದ ಬಿಲ್ಲವ, ಈಡಿಗ ಸಮುದಾಯಗಳಿಗೆ ಶೀಘ್ರವೇ ಬೊಮ್ಮಾಯಿ ಸಿಹಿ ಸುದ್ದಿ, ಏನದು?

janaspandana CM bommai 1

ಬೆಂಗಳೂರು: ರಾಜ್ಯದ ಬಿಲ್ಲವ ಹಾಗೂ ಈಡಿಗ ಸಮುದಾಯಗಳಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಶೀಘ್ರವೇ ಸಿಹಿ ಸುದ್ದಿ ನೀಡಲಿದೆ. ಈ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಎರಡೂ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಹಣ ಮೀಸಲಿಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

“ರಾಜ್ಯದ ಬಿಲ್ಲವ ಹಾಗೂ ಈಡಿಗ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ಹೊಂದಿದೆ. ಮುಂಬರುವ ದಿನಗಳಲ್ಲಿ ಎರಡೂ ಸಮುದಾಯಗಳಿಗೆ ಪ್ರತ್ಯೇಕವಾಗಿ ಹಣ ಮೀಸಲಿರಿಸಿ, ಆ ಹಣವನ್ನು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ರೂಪುರೇಷೆ ಸಿದ್ಧಪಡಿಸಲಿದೆ” ಎಂದು ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | ಸರ್.ಎಂ.ವಿ.ಗೆ ಸರ್ಕಾರದ ಗೌರವ: ಮುಂದಿನ ವರ್ಷದ ಆಚರಣೆ ಘೋಷಿಸಿದ ಸಿಎಂ ಬೊಮ್ಮಾಯಿ

Exit mobile version