Site icon Vistara News

Government Holidays 2023 | ಮಹಾವೀರ ಜಯಂತಿ; ಸರ್ಕಾರಿ ರಜೆ ಏ.3ಕ್ಕೆ ಬದಲಾಗಿ ಏ.4 ಕ್ಕೆ ನಿಗದಿ

govt-employee-holidays list for 2023

ಬೆಂಗಳೂರು: ಈ ವರ್ಷದ ಸಾಂದರ್ಭಿಕ ರಜಾ ಪಟ್ಟಿಯನ್ನು (Government Holidays 2023) ರಾಜ್ಯ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿಯೇ ಪ್ರಕಟಿಸಿದ್ದು, ಇದರಲ್ಲಿ ಮಹಾವೀರ ಜಯಂತಿಯ ರಜೆ ದಿನವನ್ನು ಬದಲಾವಣೆ ಮಾಡಿ ಸರ್ಕಾರ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.

ಈಗಾಗಲೇ ಪ್ರಕಟವಾಗಿದ್ದ ರಜಾದಿನಗಳ ಪಟ್ಟಿಯಲ್ಲಿ ಏಪ್ರಿಲ್‌ 3ರಂದು ಮಹಾವೀರ ಜಯಂತಿಯ ಪ್ರಯುಕ್ತ ರಜೆ ಎಂದು ತಿಳಿಸಲಾಗಿತ್ತು. ಈಗ ಏಪ್ರಿಲ್‌ 3ರ ಬದಲಾಗಿ ಏಪ್ರಿಲ್‌ 4 ರಂದು ರಜೆ ಎಂದು ಪ್ರಕಟಿಸಲಾಗಿದೆ.

ತಿದ್ದುಪಡಿ ಅಧಿಸೂಚನೆ ಹೊರಡಿಸಲು ಸೂಚನೆ.

ಸಾರ್ವತ್ರಿಕ ರಜಾ ದಿನಗಳ ಪರಿಷ್ಕೃತ ಪಟ್ಟಿ

ಕ್ರಮ.ಸಂ.ದಿನಾಂಕವಾರಗಳುರಜಾ ದಿನ
1.ಜನವರಿ 26ಗುರುವಾರಗಣರಾಜ್ಯೋತ್ಸವ
2.ಫೆಬ್ರವರಿ 18ಶನಿವಾರಮಹಾ ಶಿವರಾತ್ರಿ
3.ಮಾರ್ಚ್ 22ಬುಧವಾರಯುಗಾದಿ ಹಬ್ಬ
4.ಏಪ್ರಿಲ್‌ 4ಮಂಗಳವಾರಮಹಾವೀರ ಜಯಂತಿ
5.ಏಪ್ರಿಲ್‌ 7ಶುಕ್ರವಾರಗುಡ್‌ ಫ್ರೈಡೇ
6.ಏಪ್ರಿಲ್‌ 14ಶುಕ್ರವಾರಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
7.ಮೇ 1ಸೋಮವಾರಕಾರ್ಮಿಕ ದಿನಾಚರಣೆ
8.ಜೂನ್‌ 29ಗುರುವಾರಬಕ್ರೀದ್‌
9.ಜುಲೈ 29ಶನಿವಾರಮೊಹರಂ ಕಡೇ ದಿನ
10.ಆಗಸ್ಟ್‌ 15ಮಂಗಳವಾರಸ್ವಾತಂತ್ರ ದಿನ
11.ಸೆಪ್ಟೆಂಬರ್‌ 18ಸೋಮವಾರವರಸಿದ್ಧಿ ವಿನಾಯಕ ವ್ರತ
12.ಸೆಪ್ಟೆಂಬರ್‌ 28ಗುರುವಾರಈದ್‌- ಮಿಲಾದ್‌
13.ಅಕ್ಟೋಬರ್‌ 2ಸೋಮವಾರಗಾಂಧಿ ಜಯಂತಿ
14.ಅಕ್ಟೋಬರ್‌ 23ಸೋಮವಾರಮಹಾನವಮಿ, ಆಯುಧ ಪೂಜೆ
15.ಅಕ್ಟೋಬರ್‌ 24ಮಂಗಳವಾರವಿಜಯದಶಮಿ
16.ನವೆಂಬರ್‌ 1ಬುಧವಾರಕನ್ನಡ ರಾಜ್ಯೋತ್ಸವ
17.ನವೆಂಬರ್‌ 14ಮಂಗಳವಾರಬಲಿಪಾಢ್ಯಮಿ, ದೀಪಾವಳಿ
18.ನವೆಂಬರ್‌ 30ಗುರುವಾರಕನಕದಾಸ ಜಯಂತಿ
19.ಡಿಸೆಂಬರ್‌ 25ಸೋಮವಾರಕ್ರಿಸ್‌ಮಸ್‌

ಇದನ್ನೂ ಓದಿ|Govt Employees | 2023ರ ಸಾರ್ವತ್ರಿಕ ರಜೆ ಪಟ್ಟಿ ಪ್ರಕಟ: ಸರ್ಕಾರಿ ನೌಕರರಿಗೆ 98 ದಿನ ರಜೆ

Exit mobile version