Site icon Vistara News

ಬೇಲೂರು, ಹಳೇಬೀಡಿಗೆ ಶುಕ್ರವಾರ ರಾಜ್ಯಪಾಲರ ಭೇಟಿ

ರಾಜ್ಯಪಾಲ

ಹಾಸನ: ಜಿಲ್ಲೆಯ ಐತಿಹಾಸಿಕ ಸ್ಥಳ ಬೇಲೂರು ಹಾಗೂ ಹಳೇಬೀಡಿಗೆ ಭೇಟಿ ನೀಡುವ ಸಲುವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ನಗರಕ್ಕೆ ಆಗಮಿಸಿದ್ದಾರೆ.

ಶುಕ್ರವಾರ ಬೇಲೂರು ಮತ್ತು ಹಳೆಬೀಡಿಗೆ ರಾಜ್ಯಪಾಲರು ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ಕುವೆಂಪು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಭಾಗವಹಿಸಲು ಅವರು ಶಿವಮೊಗ್ಗಕ್ಕೆ ಗುರುವಾರ ತೆರಳಿದ್ದರು. ಕಾರ್ಯಕ್ರಮದ ಬಳಿಕ ಅಲ್ಲಿಂದ ನಗರಕ್ಕೆ ಆಗಮಿಸಿದರು. ಜಿಲ್ಲೆಯ ಗಡಿಯಲ್ಲಿ ರಾಜ್ಯಪಾಲರನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಶ್ರೀನಿವಾಸ ಗೌಡ ಸ್ವಾಗತಿಸಿದರು.

ಗುರುವಾರ ರಾತ್ರಿ ಹಾಸನದ ಸರ್ಕಾರಿ ಅತಿಥಿ ಗೃಹದಲ್ಲಿ ರಾಜ್ಯಪಾಲರು ತಂಗಲಿದ್ದು, ಶುಕ್ರವಾರ ಬೆಳಗ್ಗೆ ಬೇಲೂರು ಹಾಗೂ ಹಳೆಬೀಡಿಗೆ ಭೇಟಿ ನೀಡಿ ಬಳಿಕ ಬೆಂಗಳೂರಿಗೆ ಮರಳಲಿದ್ದಾರೆ.

ಇದನ್ನೂ ಓದಿ | ವಿವಿಗಳಿಗೆ ರಾಜ್ಯಪಾಲರ ಬದಲು ಸಿಎಂ ಕುಲಾಧಿಪತಿ, ಹೊಸ ನಿಯಮ ಜಾರಿಗೆ ಮಮತಾ ತಂತ್ರ

Exit mobile version