ಬೆಂಗಳೂರು: ಹಿರಿಯ ನಾಗರಿಕರು ತಮ್ಮ ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅವರೊಂದಿಗೆ ಗೌರವದಿಂದ ವರ್ತಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ರಾಜ್ಯ ಸರ್ಕಾರ ಎಲ್ಲ ಇಲಾಖೆಗಳಿಗೆ ಸೂಚಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಿಗೆ ಹಿರಿಯ ನಾಗರಿಕರು ಆಗಮಿಸಿದಾಗ ಅವರಿಗೆ ಸಲ್ಲಬೇಕಾದ ಗೌರವವಾಗಲಿ, ಕುಳಿತುಕೊಳ್ಳಲು ಸರಿಯಾದ ಆಸನವಾಗಲಿ ಇರುವುದಿಲ್ಲ. ದಿನಪೂರ್ತಿ ಕಾಯುವ ಪರಿಸ್ಥಿತಿ ಇರುತ್ತದೆ ಹೀಗಾಗಿ ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದರೊಂದಿಗೆ, ಆದ್ಯತೆ ಮೇಲೆ ಮನವಿಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಲಾಗಿದೆ. ಈಗಾಗಲೇ ಎಲ್ಲ ಕಚೇರಿಗಳಿಗೂ ಸುತ್ತೋಲೆಯನ್ನು ಕಳೆದ ವರ್ಷ ಜೂನ್ 21ಕ್ಕೆ ಹೊರಡಿಸಲಾಗಿತ್ತು.
ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಸಹಕರಿಸಲು 10 ರೊಬೊಟ್‌ಗಳು ರೆಡಿ