ಧಾರವಾಡ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಸೇರಿ ಹಲವು ಕಾರಣಗಳಿಗಾಗಿ ಭಾನುವಾರ ಕರ್ನಾಟಕಕ್ಕೆ (Modi In Karnataka) ಆಗಮಿಸಿದ ಮೋದಿ ಅವರಿಗೆ ಭಾರಿ ಸ್ವಾಗತ ಸಿಕ್ಕಿದೆ. ಧಾರವಾಡದಲ್ಲೂ ಮೋದಿ ಅವರಿಗೆ ಜನರಿಂದ ಉತ್ತಮ ಸ್ವಾಗತ ದೊರೆತಿದೆ. ಇದೇ ವೇಳೆ ಧಾರವಾಡದಲ್ಲಿ ಮೋದಿ ಅವರನ್ನು ಭೇಟಿಯಾಗಿ, ಅವರಿಗೆ ಆರತಿ ಬೆಳಗುವ ಉದ್ದೇಶ ಇದ್ದ ಅಜ್ಜಿಗೆ ಪ್ರಧಾನಿ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಆದರೆ, ಅಜ್ಜಿಯು ದೂರದಿಂದಲೇ ಮೋದಿ ಅವರಿಗೆ ಆರತಿ ಬೆಳಗುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಧಾರವಾಡ ಐಐಟಿಗೆ ಮೋದಿ ಬಂದಾಗ ದೂರಿಂದಲೇ ಅಜ್ಜಿ ಆರತಿ ಬೆಳಗಿದ್ದಾರೆ. ಧಾರವಾಡ ತಾಲೂಕಿನ ಬೇಲೂರು ಗ್ರಾಮದಿಂದ ಬಂದಿದ್ದ ಚಿಕ್ಕಮಠ ಎಂಬ ಅಜ್ಜಿ ಹಠ ಹಿಡಿದು ಆರತಿ ಬೆಳಗಿದ್ದಾರೆ. ವೇದಿಕೆ ಮೇಲೆ ಮೋದಿ ಅವರು ಭಾಷಣ ಮಾಡುವಾಗ, ವೇದಿಕೆಯ ಎದುರಿದ್ದ ಅಜ್ಜಿಯು ದೂರದಿಂದ ಆರತಿ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಇದನ್ನೂ ಓದಿ: Modi in karnataka: ನಮಸ್ಕರಿಸಲು ಹೋದ ಕಾರ್ಯಕರ್ತನಿಗೆ ತಲೆ ಬಾಗಿ ನಮಿಸಿದ ಮೋದಿ; ಪ್ರಧಾನಿ ಸರಳತೆಗೆ ಮೆಚ್ಚುಗೆ