Site icon Vistara News

ಚಾಮರಾಜಪೇಟೆಯಲ್ಲಿ ಮತ್ತೆ ಶುರುವಾದ ಮೈದಾನ ವಿವಾದ

bangalore chamrajpet ground

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಮೈದಾನದ ವಿವಾದ ಮತ್ತೆ ಶುರುವಾಗಿದೆ. ಇದು ಈದ್ಗಾ ಮೈದಾನ‌ ಅಲ್ಲ, ಬಿಬಿಎಂಪಿ ಆಟದ ಮೈದಾನ ಎಂದು ಸನಾತನ ಸಂಸ್ಥೆ ಕಿಡಿ ಕಾರಿದ್ದು, ಸರ್ವರಿಗೂ ಮೈದಾನವನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದೆ.

ನ್ಯಾಯಾಲಯ ಈ ಸ್ಥಳವನ್ನು ಬಿಬಿಎಂಪಿ ಮೈದಾನವೆಂದು ಹೇಳಿದ್ದರೂ ಅನ್ಯಮತೀಯರು ಇದನ್ನು ಈದ್ಗಾ ಮೈದಾನವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ಕೇವಲ ರಂಜಾನ್‌ ಹಾಗೂ ನಮಾಜ್‌ ಮಾಡಲು ಸರ್ಕಾರ ಅವಕಾಶ ನೀಡುತ್ತದೆ. ಆದರೆ ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ ಅಥವಾ ಹಿಂದೂಗಳ ಇನ್ನಿತರ ಹಬ್ಬಗಳನ್ನು ಆಚರಿಸಲು ಅನುಮತಿ ನೀಡುತ್ತಿಲ್ಲ. ಇದು ಹಿಂದೂಗಳ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಇದು ಸಾರ್ವಜನಿಕ ಆಸ್ತಿಯಾಗಿರುವುದರಿಂದ ಎಲ್ಲರಿಗೂ ಮುಕ್ತ ಅವಕಾಶ ಕೊಡಬೇಕು. ಸರ್ಕಾರ ಲ್ಯಾಂಡ್‌ ಜಿಹಾದ್‌ಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸನಾತನ ಸಂಸ್ಥೆಯ ಮೋಹನ್‌ ಗೌಡ ಒತ್ತಾಯಿಸಿದ್ದಾರೆ.

ಇಲ್ಲಿ ವರ್ಷದಲ್ಲಿ 2 ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ಇದುವರೆಗೂ ಹಿಂದೂ ಧರ್ಮದ ಸಾಂಸ್ಕೃತಿಕ ಕಾರ್ಯಕ್ರಮ, ವಿಶ್ವ ಯೋಗ ದಿನ ಹಾಗೂ ರಾಷ್ಟ್ರೀಯ ಹಬ್ಬಗಳ ದಿನದಂದು ರಾಷ್ಟ್ರಧ್ವಜ ಹಾರಿಸಲೂ ಅನುಮತಿ ನೀಡಿಲ್ಲ. ಇನ್ನು ಮೂರು ದಿನಗಳೊಳಗೆ ಹಿಂದೂ ಸಂಘಟನೆಗಳಿಂದ ಸಿಎಂಗೆ ಪತ್ರ ಬರೆಯಲಾಗುತ್ತದೆ. ಬಿಬಿಎಂಪಿ ಆಟದ ಮೈದಾನವನ್ನು ಕೇವಲ ಕ್ರೀಡೆಗಳ ಉದ್ದೇಶಕ್ಕೆ ಬಳಸಬೇಕು. ಚಾಮರಾಜಪೇಟೆಯ ಮೈದಾನ ಸಾರ್ವಜನಿಕರ ಆಸ್ತಿಯಾಗಿದ್ದರೂ, ಅದನ್ನು ಕುರಿಸಂತೆ ಮಾಡಲು ಯಾಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಮೋಹನ್‌ ಗೌಡ ಪ್ರಶ್ನಿಸಿದ್ದಾರೆ.

ಈ ಮೈದಾನಕ್ಕೆ ಮುಸ್ಲಿಂ ದರ್ಗಾ ಅಂತಾ ಇದರ ಹೆಸರು ಬದಲಾಯಿಸಲಾಗಿದೆ. ದರ್ಗಾ ಅಂದರೆ ಅಲ್ಲಿ ಮುಸ್ಲಿಂ ಧರ್ಮಗುರುಗಳ‌ ಸಮಾಧಿ ಇರಬೇಕು. ಆದರೆ ಈ ಮೈದಾನದಲ್ಲಿ ಯಾವುದೇ ಸಮಾಧಿ ಇಲ್ಲ. ಈಗ ದರ್ಗಾ ಎಂದು ಹೆಸರು ಬದಲಾವಣೆ ಮಾಡಿಕೊಂಡು, ಮುಂದಿನ ದಿನಗಳಲ್ಲಿ ಇಲ್ಲಿ ಮಸೀದಿ ಕಟ್ಟುವ ಹುನ್ನಾರ ನಡಿಯುತ್ತಿದೆ. ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು, ಇಲ್ಲವಾದಲ್ಲಿ ಈದ್ಗಾ ಟವರ್‌ ನೆಲಸಮ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ | Love Jihad: ಲವ್ ಜಿಹಾದ್ ವಿರುದ್ಧ ಬೃಹತ್ ಪ್ರತಿಭಟನೆ

Exit mobile version