ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಜಿ.ಎಸ್. ಉಮಾಪತಿ ಅವರು ನೇಮಕವಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಆರ್‌ಎಸ್‌ಎಸ್ ಸ್ವಯಂಸೇವಕರಾಗಿ ನಂತರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಜಿ.ಎಸ್. ಉಮಾಪತಿ ಅವರು ಇನ್ನು ಮುಂದೆ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ (RSS Karnataka) ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಉಮಾಪತಿಯವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಆಡನೂರು ಗ್ರಾಮದವರು. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ನಂತರ ಮಂಗಳೂರಿನ ಎನ್.ಐ.ಟಿ.ಕೆ.ಯಲ್ಲಿ (ಆಗಿನ ಕೆ.ಆರ್.ಇ.ಸಿ.) ಎಂ.ಇ. ಇನ್ ಸ್ಟ್ರಕ್ಚರ್ಸ್ ಹಾಗೂ ಕೋಲ್ಕೊತಾದಲ್ಲಿ ಎಂ.ಇ. ಇನ್ ಪಬ್ಲಿಕ್ ಹೆಲ್ತ್ ವ್ಯಾಸಂಗ ಪೂರೈಸಿದರು. ನಂತರ ಕರ್ನಾಟಕ ಸರ್ಕಾರದ ಪಿ.ಡಬ್ಲ್ಯು.ಡಿ. ಇಲಾಖೆಯಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತರಾದರು.
ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ನಂತರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಇವರು, ಬಳ್ಳಾರಿ ಜಿಲ್ಲೆಯ ಕಾರ್ಯವಾಹರಾಗಿ, ದಾವಣಗೆರೆ ಜಿಲ್ಲೆಯ ವ್ಯವಸ್ಥಾ ಪ್ರಮುಖರಾಗಿ, ದಾವಣಗೆರೆ ಜಿಲ್ಲಾ ಸಂಘಚಾಲಕರಾಗಿ, ಶಿವಮೊಗ್ಗ ವಿಭಾಗದ ವಿಭಾಗ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ | Pralhad Joshi: ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ: ಪ್ರಲ್ಹಾದ್ ಜೋಶಿ
ಇತರ ನೂತನ ಜವಾಬ್ದಾರಿಗಳು
ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ಸಂಘಚಾಲಕರಾಗಿ ಮಿಲಿಂದ್ ಗೋಖಲೆ ಹಾಗೂ ಮಂಗಳೂರು ವಿಭಾಗದ ವಿಭಾಗ ಸಂಘಚಾಲಕರಾಗಿ ಡಾ. ನಾರಾಯಣ ಶೆಣೈ ನೇಮಕವಾಗಿದ್ದಾರೆ.