Site icon Vistara News

Guinness World Record: ವಿಶ್ವದ ಇಬ್ಬರ ದಾಖಲೆ ಮುರಿದು ಫುಟ್ಬಾಲ್‌ನಲ್ಲಿ ಗಿನ್ನಿಸ್ ದಾಖಲೆ ಸಾಧಿಸಿದ ದೇರಳಕಟ್ಟೆಯ ಯುವಕ

Football Guinness World Record mohammad shaleel

#image_title

ಉಳ್ಳಾಲ: ಕೇವಲ ಮೂವತ್ತು ಸೆಕೆಂಡುಗಳಲ್ಲಿ ಫುಟ್ಬಾಲ್‌ನೊಂದಿಗೆ ಕಾಲುಗಳ ನಡುವೆ ೧೦ ಬಾರಿ ೮ ಆಕಾರದಲ್ಲಿ ಬಾಲ್‌ ಪಾಸ್‌ ಮಾಡುವ ಮೂಲಕ ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಎಂಬ ಯುವಕ ವಿಶ್ವದಲ್ಲಿ ಇಬ್ಬರ ದಾಖಲೆ ಮುರಿದು ಇದೀಗ ತಾನು ಗಿನ್ನಿಸ್ ದಾಖಲೆ (Guinness World Record) ಸಾಧಿಸಿದ್ದಾರೆ.

೨೦೧೭ರಲ್ಲಿ ಇಂಗ್ಲೆಂಡ್‌ನ ಡೆಲೆ ಅಲ್ಲಿ ಅನ್ನುವ ವ್ಯಕ್ತಿ ೩೦ ಸೆಕೆಂಡುಗಳಲ್ಲಿ ೭ ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನಿಸ್ ದಾಖಲೆ ಸಾಧಿಸಿದ್ದರು. ೨೦೨೧ ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕ ಕ್ಯಾಲಿಫೋರ್ನಿಯಾದ ವೆಸ್ಟ್ ಲೇಕ್‌ನ ತಾಷಾ ನಿಕೋಲ್ ತೇರಾನಿ ಒಂದು ನಿಮಿಷದಲ್ಲಿ ೧೮ ಸುತ್ತುಗಳನ್ನು ಹೊಡೆಯುವ ಮೂಲಕ ಗಿನ್ನಿಸ್ ದಾಖಲೆ ಸಾಧಿಸಿ ಪುಸ್ತಕದ ಪುಟಗಳಲ್ಲಿ ಸೇರಿದ್ದರು. ಇದೀಗ ಅವರಿಬ್ಬರ ದಾಖಲೆಗಳನ್ನು ಮುರಿದು ಮಹಮ್ಮದ್ ಶಲೀಲ್ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ | Union Budget 2023: ಮಧ್ಯಮ ವರ್ಗಕ್ಕೆ ಬಂಪರ್‌, ವಾರ್ಷಿಕ 7 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ

ಬೆಳ್ಮ ದೇರಳಕಟ್ಟೆ ನಿವಾಸಿ ಆರ್.ಬಿ ಅಬ್ದುಲ್ ಹಮೀದ್ ಮತ್ತು ಮುಮ್ತಾಝ್ ದಂಪತಿ ಪುತ್ರ ಮೊಹಮ್ಮದ್ ಶಲೀಲ್ ಈ ದಾಖಲೆ ನಿರ್ಮಿಸಿದ್ದಾರೆ. ಕೂಳೂರು ಯೆನೆಪೋಯ ಸಂಸ್ಥೆಯಲ್ಲಿ ಏವಿಯೇಷನ್ ಆಂಡ್ ಲಾಜಿಸ್ಟಿಕ್ಸ್ ಕಾಲೇಜಿನ ಅಂತಿಮ ವಿದ್ಯಾರ್ಥಿಯಾಗಿರುವ ಶಲೀಲ್ ಹವ್ಯಾಸಿ ಫುಟ್ಬಾಲ್ ಆಟಗಾರ. ಒಂದು ತಿಂಗಳ ಹಿಂದೆ ಆನ್‌ಲೈನ್‌ ಮೂಲಕ ಗಿನ್ನಿಸ್ ದಾಖಲೆ ಸಾಧಿಸಲು ಅರ್ಜಿಯನ್ನು ಹಾಕಿದ್ದರು. ತಿಂಗಳ ಬಳಿಕ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಆನ್‌ಲೈನ್‌ ವಿಡಿಯೊ ಮೂಲಕ ಪರೀಕ್ಷೆಯನ್ನು ಕೊಟ್ಟಿದ್ದರು. ಇದೀಗ ಒಂದು ವಾರದಲ್ಲಿ ಇಮೇಲ್‌ಗೆ ಫಲಿತಾಂಶ ಬಂದಿದೆ.

ಇದನ್ನೂ ಓದಿ | Citadel: ರುಸ್ಸೋ ಬ್ರದರ್ಸ್ ಶೋ ಭಾರತೀಯ ಅವತರಣಿಕೆಯಲ್ಲಿ ವರುಣ್‌ ಧವನ್‌ ಜತೆ ಸಮಂತಾ

#image_title

ಇದನ್ನೂ ಓದಿ | Union Budget 2023: ನಿರ್ಮಲಾ ಸೀತಾರಾಮನ್‌ ತಂಡದಲ್ಲಿ ಇರುವವರು ಇವರೇ ನೋಡಿ

೧೦ರ ಹರೆಯದಿಂದಲೇ ಫುಟ್ಬಾಲ್ ಆಟದಲ್ಲಿ ಆಸಕ್ತಿ ಹೊಂದಿದ್ದು, ಗೆಳೆಯರ ಜತೆಗೆ ನಿರಂತರವಾಗಿ ಮನೆ ಹಿಂಬದಿಯಲ್ಲೇ ಆಟವಾಡುತ್ತಿದ್ದೆವು. ಹೀಗೆ ಮೋಸ್ಟ್ ಬಿಟ್ವೀನ್‌ದ ಲೆಗ್ ಫಿಗರ್ ಎಯ್ಟ್ಸ್ ‘ ಕುರಿತು ಆನ್‌ಲೈನ್‌ ಮೂಲಕ ನೋಡಿ ಆಸಕ್ತಿಯನ್ನು ಹೊಂದಿ ಸಾಧಿಸುವ ಛಲವನ್ನು ಇಟ್ಟುಕೊಂಡಿದ್ದೆನು. ಅದಕ್ಕಾಗಿ ಎರಡು ವರ್ಷಗಳಿಂದ ನಿರಂತರ ತರಬೇತಿಯನ್ನು ಮಾಡಿಕೊಳ್ಳುತ್ತಿದ್ದೆನು. ಪರಿಶ್ರಮ , ಮನೆಯವರ ಪ್ರೀತಿ, ಸಹೋದರ ಹಾಗೂ ಸೋದರ ಸಂಬಂಧಿಗಳ ಪ್ರೋತ್ಸಾಹ ಕೈಬಿಡಲಿಲ್ಲ. ಕಾಸರಗೋಡಿನ ಗೆಳೆಯ ಮುದಸ್ಸಿರ್ ದಾಶ್ ಬೆಲೆಬಾಳುವ ಫುಟ್ಬಾಲ್ ಅನ್ನು ಕೊಡುಗೆಯಾಗಿ ನೀಡಿದರು. ಹೆತ್ತವರು, ಗೆಳೆಯರು, ಸಹೋದರ ಬಾಷಿಂ ಹಾಗೂ ಸೋದರ ಸಂಬಂಧಿ ಶಾಹಿಲ್ ಪ್ರೋತ್ಸಾಹ ಇಷ್ಟೆತ್ತರಕ್ಕೆ ಬೆಳೆಸಿದೆ ಅನ್ನುವ ಹೆಮ್ಮೆಯಿದೆ. ಒಂದು ವಾರದ ಬಳಿಕ ಪ್ರಮಾಣ ಪತ್ರ ಕೈಗೆ ಸಿಗುವುದು ಎಂದು ಮೊಹಮ್ಮದ್ ಶಲೀಲ್ ಹೇಳಿದ್ದಾರೆ.

Exit mobile version