Site icon Vistara News

ಬೆಂಗಳೂರಿನ ವಿವಿಧೆಡೆ ಹಿಂದು ಜನಜಾಗೃತಿ ಸಮಿತಿಯಿಂದ ಸೋಮವಾರ ಗುರುಪೂರ್ಣಿಮಾ ಮಹೋತ್ಸವ

Guru Purnima Mahotsav In Bengaluru

Guru Purnima Mahotsav Organised By Hindu Jana Jagruti Samiti Across Bengaluru On Monday

ಬೆಂಗಳೂರು: ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಹಿಂದು ಜನಜಾಗೃತಿ ಸಮಿತಿಯಿಂದ ಬೆಂಗಳೂರಿನ ಹಲವೆಡೆ ಸೋಮವಾರ (ಜುಲೈ 03) ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಲಾಗಿದೆ. “ಗುರುಪೂರ್ಣಿಮೆಯ ದಿನ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪರಂಪರೆಯನ್ನು ಮುಂದುವರಿಸುವ ದಿಸೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಲಾಗಿದೆ” ಎಂದು ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಪ್ರಕಟಣೆ ತಿಳಿಸಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪ, ಯಲಹಂಕ ನ್ಯೂಟೌನ್‌ನ ಶ್ರೀ ಗಾಯತ್ರಿ ಗಣಪತಿ ದೇವಾಲಯದ ಬಳಿಯ ಶ್ರೀ ವಿನಾಯಕ ಮಿನಿ ಹಾಲ್‌ ಹಾಗೂ ಬಸವನಗುಡಿಯ ಪೂರ್ವ ಆಂಜನೇಯ ದೇವಸ್ಥಾನ ಬೀದಿಯಲ್ಲಿರುವ ಭವಾನಿ ಕಲ್ಯಾಣ ಮಂಟಪದಲ್ಲಿ ಸಂಜೆ 5.30ಕ್ಕೆ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಲಾಗಿದೆ ಎಂದು ವಿವರಿಸಿದರು.

“ಭಗವಾನ್ ಶ್ರೀಕೃಷ್ಣನು ಅರ್ಜುನನಿಂದ, ಆರ್ಯ ಚಾಣಕ್ಯರು ಸಾಮ್ರಾಟ ಚಂದ್ರಗುಪ್ತನಿಂದ ಆಗಿನ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯನ್ನು ಮಾಡಿದರು ಹಾಗೂ ಆದರ್ಶ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದರು. ಇಂತಹ ಮಹಾನ್ ಗುರುಪರಂಪರೆಯನ್ನು ಕಾಪಾಡುವ ಮತ್ತು ಶ್ರೀ ಗುರುಗಳ ಚರಣಗಳಲ್ಲಿ ಶರಣಾಗತಭಾವದಿಂದ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ ಆಗಿದೆ. ಇಂತಹ ದಿನದಂದು ಎಲ್ಲರೂ ಗುರುಗಳನ್ನು ಆರಾಧಿಸೋಣ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Hampi News : ಸಂಭ್ರಮ ಸಡಗರದಿಂದ ಜರುಗಿತು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ

ಗುರುಪೂರ್ಣಿಮಾ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಗುರುಪೂಜೆ, ಹಿಂದೂಗಳ ಜಾಗೃತಿ ಮತ್ತು ಐಕ್ಯತೆಯ ಆವಶ್ಯಕತೆಯ ಕುರಿತು ಪ್ರವಚನ ಮತ್ತು ಸಮಾಜಸೇವೆಯಲ್ಲಿರುವ ಗಣ್ಯರಿಂದ ರಾಷ್ಟ್ರ ಮತ್ತು ಧರ್ಮದ ಮಾರ್ಗದರ್ಶನ, ಅದೇ ರೀತಿ ಸ್ವಂತದ ರಕ್ಷಣೆಗಾಗಿ ಸ್ವರಕ್ಷಾ ಪ್ರಶಿಕ್ಷಣದ ಪ್ರಾತ್ಯಕ್ಷಿಕೆ ಇರಲಿದೆ. ವಿವಿಧ ಗ್ರಂಥಗಳ ಪ್ರದರ್ಶನ, ರಾಷ್ಟ್ರ ಮತ್ತು ಧರ್ಮಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ ಕೂಡ ನಡೆಯಲಿದೆ. ಹಾಗಾಗಿ, ಎಲ್ಲರೂ ಭಾಗವಹಿಸಬೇಕು” ಎಂದು ಮನವಿ ಮಾಡಿದ್ದಾರೆ.

Exit mobile version