ಬೆಂಗಳೂರು: ಇಡೀ ದೇಶದಲ್ಲಿ ಮೊದಲ ಬಾರಿಗೆ ಸವಿತಾ ಸಮಾಜದಿಂದ(Savita samaj) ಮೂರು ದಿನಗಳ ಕಾಲ ಹೇರ್ ಕೇರ್ ಸಲೂನ್ ಮತ್ತು ಸ್ಪಾ ಎಕ್ಸ್‌ಪೋಗೆ(ಆ.೬ರಿಂದ ೯) ನಗರದಲ್ಲಿ ಚಾಲನೆ ನೀಡಲಾಗಿದೆ. ಮಾನ್ಯತಾ ಟೆಕ್‌ಪಾರ್ಕ್ ಹತ್ತಿರದ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಸಚಿವ ವಿ. ಸೋಮಣ್ಣ ಹಾಗೂ ನಟಿ ತಾರಾ ಎಕ್ಸ್‌ಪೋವನ್ನು ಶನಿವಾರ ಉದ್ಘಾಟಿಸಿದರು.
ಮೊದಲ ದಿನ ಎಕ್ಸ್‌ಪೋದಲ್ಲಿ 40ಕ್ಕೂ ಹೆಚ್ವು ಕಂಪನಿಗಳಿಂದ ಕೇಶ ಮತ್ತು ಸೌಂದರ್ಯವರ್ಧನೆ ವಸ್ತುಗಳನ್ನು ಅನಾವರಣಗೊಳಿಸಲಾಯಿತು. ಕೇಶ ಮತ್ತು ಸೌಂದರ್ಯವರ್ಧನೆಗೆ ಬೇಕಾದ ಹೊಸ ಶೈಲಿಯ ವಸ್ತುಗಳು, ವಿಗ್, ಫೇಸ್ ಕ್ರೀಮ್, ಬ್ಲೇಡ್, ಟ್ರಿಮ್ಮರ್, ಫೇಸ್‌ವಾಶ್, ಸೋಪ್, ಪೌಡರ್, ಹೇರ್ ಡ್ರೈ, ಹೇರ್ ಕಲರ್ ಮುಂತಾದವು ಎಕ್ಸ್‌ಪೋದಲ್ಲಿ ಕಂಡು ಬಂದವು.
ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ “”ದೇಶದಲ್ಲಿ ಮೊದಲ ಬಾರಿಗೆ ಈ ಸಮಾಜ ತಮ್ಮ ವೃತ್ತಿ ಬಾಂಧವರನ್ನು ಜತೆಗೆ ಕರೆದುಕೊಂಡು ಬರುತ್ತಿರುವುದು ಸ್ವಾಗತಾರ್ಹ. ಹೇರ್ ಕೇರ್ ಸಲೂನ್ ದೊಡ್ಡ ಉದ್ಯಮವಾಗಿದ್ದು, ಸವಿತಾ ಸಮಾಜ ಅತ್ಯಂತ ಪವಿತ್ರ ಸಮಾಜʼʼ ಎಂದು ಹೇಳಿದರು.
ಇದನ್ನೂ ಓದಿ | Heavy Drugs| ಬೆಂಗಳೂರು ರೈಲು ನಿಲ್ದಾಣದಲ್ಲಿ 112 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ಸವಿತಾ ಸಮಾಜ ಅಧ್ಯಕ್ಷ ಎಸ್. ನರೇಶ್ ಕುಮಾರ್ ಮಾತನಾಡಿ “”ಮೊದಲ ಬಾರಿಗೆ ಹೇರ್ ಕೇರ್ ಸಲೂನ್ ಮತ್ತು ಸ್ಪಾ ಎಕ್ಸ್‌ಪೋ ಆಯೋಜಿಸಲಾಗಿದೆ. ಇದು ಕರ್ನಾಟಕಕ್ಕೆ ಹೆಮ್ಮೆ ತರುವ ವಿಚಾರ. ಸಮಾಜದ ಜನರನ್ನು ಆರ್ಥಿಕವಾಗಿ ಸದೃಢ ಮಾಡಲು ಇದನ್ನು ಆಯೋಜಿಸಿದ್ದೇವೆʼʼ ಎಂದರು.
“”ರಾಜ್ಯ ಸರ್ಕಾರಕ್ಕೆ ಕೇಶ ರಕ್ಷಣೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಉತ್ಪಾದನೆ ಪಾರ್ಕ್ ಸ್ಥಾಪಿಸಲು ಮನವಿ ಮಾಡಿದ್ದೇವೆ. ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸಬೇಕುʼʼ ಎಂದು ಸವಿತಾ ಸಮಾಜದ ಪ್ರಮುಖರು ಸಚಿವರಿಗೆ ಮನವಿ ಮಾಡಿದರು. ಆ.6ರಿಂದ 9ರವರೆಗೆ ಮೂರು ದಿನ ಹೇರ್‌ಕೇರ್ ಸಲೂನ್ ಮತ್ತು ಸ್ಪಾ ಎಕ್ಸ್‌ಪೋ ನಡೆಯುತ್ತಿದೆ. ಬ್ಯೂಟಿ, ಕೇಶ ಸೌಂದರ್ಯಕ್ಕೆ ಬೇಕಾದ ವಸ್ತುಗಳು ಸಿಗಲಿವೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ ಈ ಬಾರಿಯೂ ವಾರ್ಡ್‌ಗೊಂದೇ ಗಣೇಶ ಕೂರಿಸಲು ಅವಕಾಶ