Site icon Vistara News

Hampi University | ಡಾ.ಮಂಜುನಾಥ್, ಷಡಕ್ಷರಿ, ಕೃಷ್ಣಪ್ಪಗೆ ನಾಡೋಜ ಗೌರವ; ನುಡಿ ಹಬ್ಬದಂದು ಪದವಿ ಪ್ರದಾನ

Hampi university ಡಾ ಸಿ ಎನ್‌ ಮಂಜುನಾಥ್‌, ಷಡಕ್ಷರಿ, ಕೃಷ್ಣಪ್ಪ

ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ (Hampi University) ನೀಡಲಾಗುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಈ ಬಾರಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್, ಹಿರಿಯ ಸಾಹಿತಿ ಕೃಷ್ಣಪ್ಪ ಜಿ. ಹಾಗೂ ಲೇಖಕ ಎಸ್. ಷಡಕ್ಷರಿ ಅವರಿಗೆ ಒಲಿದಿದೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ಇದೇ ಡಿ.8 ರಂದು ಆಯೋಜಿಸಿರುವ ನುಡಿಹಬ್ಬ (ಘಟಿಕೋತ್ಸವ) ದಲ್ಲಿ ಮೂವರು ಗಣ್ಯರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ಅವರು ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಡಿ.ಲಿಟ್ ಹಾಗೂ ಪಿಎಚ್.ಡಿ ಪದವಿ ಪ್ರದಾನ ಮಾಡಲಿದ್ದು, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಹಾಸನ ಮೂಲದ ಡಾ.ಸಿ.ಎನ್. ಮಂಜುನಾಥ್ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ, ಸಾಹಿತ್ಯ ಕೃಷಿಯನ್ನು ಗುರುತಿಸಿ ಬೆಂಗಳೂರಿನ ಕೃಷ್ಣಪ್ಪ ಜಿ. ಅವರಿಗೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ತುಳವನೂರು ಗ್ರಾಮದ ಎಸ್. ಷಡಕ್ಷರಿ ಅವರಿಗೆ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ | ಕನ್ನಡ ಸಾರಸ್ವತ ಲೋಕದ ರಾಜ ರತ್ನ, ರತ್ನನ ಪದಗಳ ರಾಜರತ್ನಂ

Exit mobile version