Site icon Vistara News

Hampi Utsav 2023: ಜಾನಪದ ವಾಹಿನಿ ಮೆರವಣಿಗೆಯಲ್ಲಿ ಮೇಳೈಸಿತು ಕರ್ನಾಟಕದ ಸಾಂಸ್ಕೃತಿಕ, ಕಲಾ ವೈಭವ

Hampi Utsav 2023

#image_title

ವಿಜಯನಗರ: ಐತಿಹಾಸಿಕ ಹಂಪಿ ಉತ್ಸವದ (Hampi Utsav 2023) ಮೂರನೇ ದಿನವಾದ ಭಾನುವಾರ ಜಾನಪದ ವಾಹಿನಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಹಂಪಿಯ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಮೆರವಣಿಗೆಗೆ ಸಚಿವ ಆನಂದ್‌ ಸಿಂಗ್‌ ಅವರು ಚಾಲನೆ ನೀಡಿದರು. ಅಲಂಕೃತ ಮಂಟಪದಲ್ಲಿ ವಿರಾಜಮಾನವಾಗಿದ್ದ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಚಿವ ಆನಂದ್‌ಸಿಂಗ್‌ ಅವರು ಚಾಲನೆ ನೀಡಿದರು.

ಮುಂದೆ ರಾಜಗಾಂಭೀರ್ಯದಿಂದ ಗಜರಾಜ ಹೆಜ್ಜೆ ಹಾಕುತ್ತಿದ್ದರೆ ಹಿಂದೆ ಭುವನೇಶ್ವರಿ ದೇವಿ ಇದ್ದ ಮಂಟಪ ಸಾಗಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಕಹಳೆ ತಂಡ, ವೀರಗಾಸೆ ತಂಡ, ಸಮ್ಮೇಳ, ನಂದಿಕೋಲು, ಹಗಲು ವೇಷಧಾರಿಗಳು, ಮರಗಾಲು ಮನುಷ್ಯರು, ಲಂಬಾಣಿ ಸಾಂಪ್ರದಾಯಿಕ ನೃತ್ಯ ತಂಡ, ಡೊಳ್ಳು ಕುಣಿತ ಹೀಗೆ ಅನೇಕ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಪ್ರತಿಯೊಂದು ತಂಡದ ಕಲೆಯನ್ನು ಸಚಿವ ಆನಂದ್‌ಸಿಂಗ್‌ ಅವರು ನಿಂತು ನೋಡಿ ಖುಷಿಪಟ್ಟರು. ಇನ್ನು ಕಲಾತಂಡಗಳ ಹಾಗೂ ಸಾಂಪ್ರದಾಯಿಕ ವಾದ್ಯಗಳ ನಾದಕ್ಕೆ ವಿದೇಶಿ ಯುವತಿಯೊಬ್ಬಳು ಹೆಜ್ಜೆ ಹಾಕಿ ಗಮನ ಸೆಳೆದಳು. ಇನ್ನು ಈ ಜಾನಪದ ವಾಹಿನಿ ಮೆರವಣಿಗೆಯಲ್ಲಿ ಅಪ್ಪು ಫೋಟೊ ರಾರಾಜಿಸಿತು. ನಾನಾ ಜಾನಪದ ಕಲಾತಂಡಗಳ ಕಲೆಯನ್ನು ಹಾಗೂ ಅಲಂಕೃತ ಮಂಟಪದಲ್ಲಿ ವಿರಾಜಮಾನಳಾಗಿದ್ದ ತಾಯಿ ಭುವನೇಶ್ವರಿಯನ್ನು ಜನರು ಕಣ್ತುಂಬಿಕೊಂಡರು.

ಇದನ್ನೂ ಓದಿ | Female Ownership : ಕರ್ನಾಟಕದ ಶೇ.68 ಆಸ್ತಿಗಳಿಗೆ ಮಹಿಳೆಯರು ಮಾಲೀಕರು : ವಿಶ್ವ ಬ್ಯಾಂಕ್‌ ಅಧ್ಯಯನ

Exit mobile version