ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂಜಳಿಗೆ ಗ್ರಾಮದ ಮಂಜುನಾಥರವರು ಪ್ರತಿ ವರ್ಷ ಸರ್ಕಾರಿ ಶಾಲೆಗಳನ್ನು (Government School) ದತ್ತು ಪಡೆದು ಒಂದು ಹೊಸ ಅಭಿಯಾನವನ್ನು ಹುಟ್ಟು ಹಾಕಿದ್ದಾರೆ. “ನಮ್ಮ ನಡಿಗೆ ಸರ್ಕಾರಿ ಶಾಲೆಯ ಕಡೆಗೆ” ಎನ್ನುವ ಅಭಿಯಾನವಾಗಿದೆ. ಈ ಅಭಿಯಾನದ ಉದ್ದೇಶ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹಾಗೂ ಬೆಳೆಸುವುದು. ಹಳ್ಳಿಯ ಭಾಗದ ಬಡಜನರ ಮಕ್ಕಳ ಕಲಿಕೆಗೋಸ್ಕರ ತಂದಂತಹ ಹೊಸ ಅಭಿಯಾನ ಬಡಜನರ ಮಕ್ಕಳ ಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಮಕ್ಕಳ ಏಳಿಗೆಯನ್ನು ಕಲಿಕೆಯಲ್ಲಿ ಉತ್ತಮಪಡಿಸುವುದಕ್ಕೆ ಗುರಿ ಇಟ್ಟುಕೊಂಡು ಇಡೀ ಕರ್ನಾಟಕವೇ ಹಿಂತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಕಳೆದ ವರ್ಷ ಸುಮಾರು 30 ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್(School Bag), ನೋಟ್ ಬುಕ್‌ಗಳನ್ನು (Note Book) 1000 ಬಡ ವಿದ್ಯಾರ್ಥಿಗಳಿಗೆ (Poor Student) ವಿತರಣೆ ಮಾಡಿದ್ದಾರೆ. 50ಕ್ಕಿಂತ ಹೆಚ್ಚು ಮಕ್ಕಳಿರುವ ಹಾಜರಾತಿ ಆಧಾರದ ಮೇಲೆ 13 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿರುತ್ತಾರೆ.
ಹಂಜಳಿಗೆ ಮಂಜುನಾಥ್ ರವರಿಗೆ ಸ್ಮಾರ್ಟ್ ಕ್ಲಾಸ್ ಬಗ್ಗೆ ವಿಶೇಷ ಕಾಳಜಿ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಮಗುವಿನ ದೈಹಿಕ ಮತ್ತು ಭೌತಿಕ ಶಕ್ತಿ ವೃದ್ಧಿಸಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಆದ್ಯತೆ ಮೇಲೆ ವಯಸ್ಸಿನ ಅನುಗುಣವಾಗಿ ಶಿಕ್ಷಣ ದೂರ ಕುಗ್ಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ಪ್ರತಿ ವರ್ಷ ಅಸೋಸಿಯೇಷನ್ ವತಿಯಿಂದ ಎಲ್ಲಾ ಶಾಲಾ ಮಕ್ಕಳಿಗೆ ಅಗತ್ಯವುಳ್ಳ ಉಪಕರಣಗಳನ್ನು ನೀಡುವುದರೊಂದಿಗೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದ್ದಾರೆ.
ಹಂಜಳಿಗೆ ಮಂಜುನಾಥ್ ಅವರು ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಾಲೂಕಿನ ಎಲ್ಲಾ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ 25ಕ್ಕಿಂತ ಒಳಗಿರುವ ಹಾಗೂ ಹಿರಿಯ ಪ್ರಾಥಮಿಕ ಎಲ್ಲಾ ಶಾಲೆಗಳನ್ನು ಆಯ್ಕೆ ಮಾಡಿ 2000ಸಾವಿರ ಮಕ್ಕಳಿಗೆ ಅಂದರೆ 110 ಶಾಲೆಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ನಾನೇ ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ವಿಚಾರಿಸುವ ಮೂಲಕ ವಿತರಣೆ ಮಾಡುತ್ತಿದ್ದೇನೆ. ಇವತ್ತಿನ ಕಾಲದಲ್ಲಿ ಯಾರು ಸಹ ದಾನವನ್ನು ಮಾಡಲು ಮುಂದೆ ಬರುವುದಿಲ್ಲ ನಿಮಗೆ ಇಂತಹ ಸೌಲಭ್ಯಗಳು ಹುಡುಕಿಕೊಂಡು ನಿಮ್ಮ ಹತ್ತಿರಕ್ಕೆ ಬಂದಿದೆ. ಅಂದರೆ ಅದು ಸರಿಯಾದ ರೀತಿಯಲ್ಲಿ ಕಲಿತು ತಿಳಿದುಕೊಂಡು ಬುದ್ದಿವಂತರಾಗಬೇಕು ನೀವುಗಳು ಎಂದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗವನ್ನು ಮುಗಿಸಿ ಬೇರೆ ಕಡೆ ಹೋಗಿ ಐಪಿಎಸ್ ಐಎಎಸ್ ಕೆಎಎಸ್ ಕೆಪಿಎಸ್ ಮಾಡಿ ಹುದ್ದೆಯನ್ನು ಪಡೆದಾಗ ನೀವುಗಳು ಸರ್ಕಾರಿ ಶಾಲೆಗಳನ್ನು ಎಂದಿಗೂ ಮರೆಯಬೇಡಿ ನಿಮಗೆ ಕೈಲಾದಷ್ಟು ನೀವು ಓದಿದಂತ ಶಾಲೆಗಳಿಗೆ ಏನಾದರೂ ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ ಎಂದರು.
ನಿಮ್ಮ ಶಾಲೆಯಲ್ಲಿ ಯಾವ ರೀತಿ ಸೌಲಭ್ಯವನ್ನು ಪಡೆದುಕೊಂಡು ಕಲಿತಿದೀರಾ ಅನ್ನೋದನ್ನು ನಿಮ್ಮ ಕುಟುಂಬದವರಿಗೆ ಹಾಗೂ ಗ್ರಾಮದ ಮಕ್ಕಳಿಗೆ ಹೇಳಿ ಸರ್ಕಾರಿ ಶಾಲೆಗೆ ಬರುವಂತೆ ಪ್ರೇರೇಪಿಸಬೇಕು.
ನೀವು ಸರ್ಕಾರಿ ಶಾಲೆಯಲ್ಲಿ ಚೆನ್ನಾಗಿ ಓದಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದು ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಸರ್ಕಾರಿ ಶಾಲೆಗೆ ಬರುವಂತೆ ಮನವೊಲಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿ ಸಹಾಯ ಮಾಡುವಂತಹ ಪ್ರವೃತ್ತಿಯನ್ನು ಹೊಂದಿರುತ್ತಾರೆ ಅಂತಹ ದಾನಿಗಳನ್ನು ಹುಡುಕಿ ಶಿಕ್ಷಕರು ಶಾಲೆಗೆ ಸಹಾಯ ಪಡೆದುಕೊಳ್ಳಬೇಕು ಎಂದರು.
ಈ ಸುದ್ದಿಯನ್ನೂ ಓದಿ: Ambedkar Jayanti: 18 ಸಾವಿರ ನೋಟ್‌ಬುಕ್‌ಗಳಿಂದ ಸಿದ್ಧವಾಯ್ತು ಅಂಬೇಡ್ಕರ್ ಚಿತ್ರ
ಶಿಕ್ಷಕರು ಪ್ರಾಮಾಣಿಕವಾಗಿ ಉತ್ತಮ ಬೋಧನೆಯನ್ನು ಮಕ್ಕಳಿಗೆ ಕಲಿಸಿದರೆ ಸಾಕು ನಿಮ್ಮ ವ್ಯಾಪ್ತಿಯ ಸಾರ್ವಜನಿಕರು ನಿಮ್ಮ ಶಾಲೆಗಳನ್ನು ಹುಡುಕಿಕೊಂಡು ಬಂದು ಏನಾದರೂ ದಾನ ಮಾಡಲು ಮುಂದಾಗುತ್ತಾರೆ ಅದಕ್ಕೆ ಸಂದೇಹ ಪಡುವಂತಿಲ್ಲ ಎಂದು ಹೇಳಿದರು.
ತಾಲೂಕಿನ ಶಾಲೆಗಳಾದ ಹಂಜಳಿಗೆ ಶಾಲೆ ನಲ್ಲೂರು ಶಾಲೆ, ಹೆಮ್ಮಿಗೆ ಶಾಲೆ, ಕೆಪಿಎಸ್ ರಾಯರ್ ಕೊಪ್ಪಲು, ಕಲ್ಲಾರೆ ಸರ್ಕಾರಿ ಶಾಲೆ, ಸಿಂಧುವಳ್ಳಿ ಸರ್ಕಾರಿ ಶಾಲೆ,ಕಾಗನೂರು ಶಾಲೆ, ನಾಗವಾರ ಶಾಲೆ, ಹರಿಹಳ್ಳಿ ಶಾಲೆ, ಕಾಡ್ಲೂರು ಶಾಲೆ, ಆನೆಗಳಲೆ ಶಾಲೆ, ಬೋಸಮನಹಳ್ಳಿ ಶಾಲೆ, ಮಲಗಳಲೆ, ಸಿಂಗೋಡನಲಿ ಶಾಲೆ ಒಟ್ಟು 110 ಶಾಲೆಗಳಿಗೆ ಹೋಗಿ ಎಲ್ಲ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.