ಕಲಬುರಗಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ 1001 ಅಡಿ ಉದ್ದದ ಬೃಹತ್ ತಿರಂಗಾ ರ್ಯಾಲಿ ನಡೆಯಿತು. ತಹಶಿಲ್ದಾರ್ ಕಚೇರಿಯಿಂದ ಬಸವೇಶ್ವರ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ 2000ಕ್ಕೂ ಅಧಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಕಮಲಾಪುರ ತಾಲೂಕು ಆಡಳಿತವೇ ರ್ಯಾಲಿ ಆಯೋಜನೆ ಮಾಡಿತ್ತು. ಮಕ್ಕಳು ಕೈಗಳನ್ನು ಮೇಲೆತ್ತಿ ಬೃಹತ್ ಧ್ವಜಕ್ಕೆ ಆಧಾರವಾದರು.
ತಿರಂಗಾ ರ್ಯಾಲಿಗೆ ಮುನ್ನ ಬೃಹತ್ ಬೈಕ್ ರ್ಯಾಲಿ ನಡೆಯಿತು. ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ| Har Ghar Tiranga | ಮನೆಯಲ್ಲಿ ಧ್ವಜ ಹಾರಿಸಿ ಸಂಭ್ರಮಿಸಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ