ಹಾವೇರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ತ್ರಿವರ್ಣ ಧ್ವಜ ಹಾರಿಸುವ ಸಂಭ್ರಮ ನಡೆಯುತ್ತಿದೆ. ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಮನೆಗಳ ಮುಂದೆ ಧ್ವಜ ಕಟ್ಟಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಅದನ್ನು ಪಾಲಿಸುತ್ತಲೇ ಜನರು ಎಲ್ಲ ಕಡೆಗೆ ತಿರಂಗಾ ಹಾರಿಸುತ್ತಾ ಖುಷಿ ಪಡುತ್ತಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಮಾಕನೂರು ಗ್ರಾಮದ ಹೊಲಗಳಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಕೃಷಿ ಕಾರ್ಮಿಕರು ತಾವು ಹೊಲದಲ್ಲಿ ಕೆಲಸ ಮಾಡುತ್ತಲೇ ತ್ರಿವರ್ಣ ಧ್ವಜ ಬೀಸುತ್ತಾ ಸಂಭ್ರಮಿಸಿದರು.
ಹಾವೇರಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಈರಣ್ಣ ಮಾಕನೂರು ನೇತೃತ್ವದಲ್ಲಿ ಪ್ರಗತಿಪರ ರೈತರು, ಕೃಷಿ ಕೂಲಿ ಕಾರ್ಮಿಕರು ದ್ವಜ ಹಾರಿಸಿ ಸಂಭ್ರಮಿಸಿದರು.
ಇದನ್ನೂ ಓದಿ| Har Ghar Tiranga | 3 ವರ್ಷದಲ್ಲಿ 36 ಸಾವಿರ ಕಿ.ಮೀ. ಸೈಕಲ್‌ನಲ್ಲಿ ಕ್ರಮಿಸಿದ ಯೋಧನಿಂದ ಧ್ವಜಾರೋಹಣ!