Site icon Vistara News

Harshika Poonacha: ಸಪ್ತಪದಿ ತುಳಿಯಲು ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಸಜ್ಜು; ಆ.23, 24ಕ್ಕೆ ಕೊಡಗಿನಲ್ಲಿ ಮದುವೆ

Bhuvan Ponnanna and Harshika Poonacha

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ‌ ಹರ್ಷಿಕಾ ಪೂಣಚ್ಚ ಮತ್ತು ನಟ, ಮಾಡೆಲ್ ಭುವನ್‌ ಪೊನ್ನಣ್ಣ ಮದುವೆಗೆ (Harshika Poonacha) ಮುಹೂರ್ತ ಫಿಕ್ಸ್‌ ಆಗಿದೆ. ಆಗಸ್ಟ್‌ 23 ಮತ್ತು 24 ರಂದು ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ನಡೆಯಲಿದೆ.

ತಾಯ್ತ ಸಿನಿಮಾದ ಆಡಿಯೋ ಲಾಂಚ್‌ನಲ್ಲಿ ವಿವಾಹ ದಿನಾಂಕವನ್ನು ನಟಿ ಹರ್ಷಿಕಾ ಪೂಣಚ್ಚ ಘೋಷಿಸಿದ್ದಾರೆ. ವಿರಾಜಪೇಟೆಯ ಅಮ್ಮತಿ ಕೊಡವ ಸಮಾಜದಲ್ಲಿ ನಟ ಹಾಗೂ ಮಾಡೆಲ್ ಭುವನ್ ಪೊನ್ನಣ್ಣ ಜತೆ ಹರ್ಷಿತಾ ಪೂಣಚ್ಚ ಹಸೆಮಣೆ ಏರಲಿದ್ದಾರೆ. ಸಮಾರಂಭದಲ್ಲಿ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಹಾಗೂ ಬಂಧು-ಮಿತ್ರರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | Shiva Rajkumar; ಶಿವಣ್ಣನ `ಭೈರತಿ ರಣಗಲ್’ ಶೂಟಿಂಗ್‌ ಇಂದಿನಿಂದಲೇ ಶುರು!

6 ವರ್ಷದಿಂದ ಭುವನ್ ಹಾಗೂ ಹರ್ಷಿತಾ ಪೂಣಚ್ಚ ಪ್ರೀತಿಯಲ್ಲಿದ್ದರು. ಇದರ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಹರ್ಷಿಕಾ ಪೂಣಚ್ಚ , ಭುವನ್‌ ಮತ್ತು ನಾನು ಕೊಡಗಿನವರು. ನಾವಿಬ್ಬರೂ ಆತ್ಮೀಯ ಸ್ನೇಹಿತರು. ಒಟ್ಟಿಗೆ ಒಂದು ಫ್ಯಾಷನ್‌ ಕಂಪನಿ ನಡೆಸುತ್ತಿದ್ದೇವೆ. ಭುವನ್‌ ಅಂತಾರಾಷ್ಟ್ರೀಯ ಫ್ಯಾಷನ್‌ ಶೋ ಕೊರಿಯೋಗ್ರಾಫರ್‌ ಆಗಿದ್ದವರು. ಕಷ್ಟದ ಸಮಯದಲ್ಲಿ ಅವರು ತುಂಬಾ ನೆರವು ನೀಡಿದ್ದಾರೆ ಎಂದು ತಿಳಿಸಿದ್ದರು. ಇದೀಗ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗಿದೆ.

ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹರ್ಷಿಕಾ ಹೊರಹೊಮ್ಮಿದ್ದರು. ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ ಬಳಿಕ ಅವರು ಹಿಂದಿರುಗಿ ನೋಡಿಲ್ಲ. ಈ ಚಿತ್ರದ ನಟನೆಗೆ ಹರ್ಷಿಕಾಗೆ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿ ದೊರೆತಿತ್ತು. ʼಭಲೇ ಜೋಡಿ’, ‘ಉಪೇಂದ್ರ ಮತ್ತೆ ಬಾ’, ‘ಚಾರ್‌ಮಿನಾರ್’, ‘ಕಾಸಿನಸರ’ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭುವನ್‌ ಅವರು ಕುಚ್ಚಿಕು ಕುಚ್ಚಿಕು, ರಾಂಧವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

Exit mobile version